ಫೆ.14 ರಂದು ಮಿರ್ಜಾನ–ಕೋಡ್ಕಣಿಯಲ್ಲಿ ರಾಮಕ್ಷತ್ರಿಯ ಸಂಘದಿಂದ ಹೊನಲು ಬೆಳಕಿನ ಹಗ್ಗ ಜಗ್ಗಾಟ

“ಬೆಳಕಿನ ಕಣ್ಗಾವಲು… ಶಕ್ತಿಯ ಸಮರ! “ಒಗ್ಗಟ್ಟಿನ ಹಗ್ಗ, ಗೆಲುವಿನ ಗುರಿ
ರಾಮಕ್ಷತ್ರಿಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಮಹಾಕೂಟ”

ರಾಮಕ್ಷತ್ರಿಯ ಯುವಕ ಸಂಘ ಮಿರ್ಜಾನ–ಕೋಡ್ಕಣಿ ಇವರ ಆಶ್ರಯದಲ್ಲಿ ಹಾಗೂ ಸಮಸ್ತ ರಾಮಕ್ಷತ್ರಿಯ ಸಮಾಜ ಬಾಂಧವರ ಸಹಕಾರದೊಂದಿಗೆ ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಮಾಜದ ಪುರುಷ ಮತ್ತು ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕೋಡ್ಕಣಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ..

ಬೈಟ್ – ಯೋಗೇಶ್ ನಾಯ್ಕ, ಮಿರ್ಜಾನ

ಸಮಾಜದ ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವುದು ಹಾಗೂ ಮಹಿಳೆಯರಿಗೂ ಕ್ರೀಡೆಯಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ರೀಡಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಗಣ್ಯರು ಉಪಸ್ಥಿತರಿದ್ದು, ಕ್ರೀಡಾಪಟುಗಳಿಗೆ ಶುಭ ಹಾರೈಸಲಿದ್ದಾರೆ. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 30 ಕ್ಕೂ ಅಧಿಕ ತಂಡಗಳು ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 20ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತೀಯ ಬಹುಮಾನ 10 ಸಾವಿರ ಹಾಗೂ ಚತುರ್ಥ ಬಹುಮಾನ 5 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಸರಿಸುಮಾರು ಮೂರರಿಂದ ನಾಲ್ಕು ಸಾವಿರ ಜನರು ಕಾರ್ಯಕ್ರಮದಲ್ಲಿ ಬರುವ ನಿರೀಕ್ಷೆ ಇದ್ದು ಅವರಿಗೆ ಕೂರಲು ಗ್ಯಾಲರಿ ಮತ್ತು ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಿರ್ಜಾನ–ಕೋಡ್ಕಣಿ ಭಾಗದಲ್ಲಿ ಗ್ಯಾಲರಿ ವ್ಯವಸ್ಥೆಯನ್ನು ಒಳಗೊಂಡ ಮೊದಲ ಕ್ರೀಡಾಕೂಟವಾಗಿದ್ದು ಈ ಒಂದು ಅದ್ದೂರಿ ಕ್ರೀಡಾಕೂಟಕ್ಕೆ ಸಮಸ್ತ ಸಮಾಜ ಬಾಂಧವರು, ಎಲ್ಲಾ ಊರಿನವರು ಪ್ರತಿಯೊಬ್ಬರೂ ಭಾಗವಹಿಸಿ ನಮ್ಮ ಈ ಯಶಸ್ಸಿನ ಪ್ರಯತ್ನಕ್ಕೆ ತಾವೆಲ್ಲರೂ ಕೂಡ ಸಹಕಾರಿಯಾಗಬೇಕೆಂದು ಮಿರ್ಜಾನ–ಕೋಡ್ಕಣಿ ರಾಮಕ್ಷತ್ರಿಯ ಯುವಕ ಸಂಘದ ಕಾರ್ಯದರ್ಶಿ ಯೋಗೇಶ್ ನಾಯ್ಕ ಅವರು ತಿಳಿಸಿದ್ದಾರೆ.

ಹಗ್ಗ ಜಗ್ಗಾಟ ಸ್ಪರ್ಧೆಯ ಮೂಲಕ ಸಮಾಜದ ಒಗ್ಗಟ್ಟು, ಸಹಭಾಗಿತ್ವ ಮತ್ತು ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ.