ಭಟ್ಕಳದ ಸ್ನೇಹಾ ವಿಶೇಷ ಶಾಲೆ ಮತ್ತು ತರಬೇತಿ ಸ್ಕೂಲ್‌ಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿಯಿಂದ ಬೆಡ್ ಶೀಟ್, ಸಿಹಿ ತಿಂಡಿ ವಿತರಣೆ

ಹೊನ್ನಾವರ ಸೆ.03 : 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಟ್ಕಳದ ಶಾಲೆಯ ದೀನಾ ಎಜ್ಯುಕೇಶನ್‌ ಸಂಸ್ಥೆಯ ಭಟ್ಕಳದ ಸ್ನೇಹಾ ವಿಶೇಷ ಶಾಲೆ ಮತ್ತು ತರಬೇತಿ ಸ್ಕೂಲ್‌ ವಿದ್ಯಾರ್ಥಿಗಳಿಗೆ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆಡ್ ಶೀಟ್, ಸಿಹಿ ತಿಂಡಿ ವಿತರಿಸಿದ್ರು..

ಈ ಸಹಕಾರಿಯು ರಾಜ್ಯದ 111 ಶಾಖೆಗಳಲ್ಲಿಯೂ ಈ ಕಾರ್ಯಕ್ರಮ ನಡೆಸುತ್ತ ಬಂದಿದೆ. ಮಿಲಾಗ್ರಿಸ್ ಸಹಕಾರಿಯು ತನ್ನ ಲಾಭಾಂಶವನ್ನು ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಾ ಬಂದಿರುವುದು ತುಂಬಾ ಸಂತೋಷದ ವಿಷಯ, ಈ ಸಹಕಾರಿಯೂ ಇನ್ನಷ್ಟು ಹೆಚ್ಚು ಅಭಿವೃದ್ಧಿ ಹೊಂದುವ ಮೂಲಕ ಇನ್ನಷ್ಟು ಜನರಿಗೆ ಸಹಾಯಕವಾಗಿದೆ.

ಸುಮಾರು 1493 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ. ಸರಿ ಸುಮಾರು 1400 ಕೋಟಿಗಳಷ್ಟು ಠೇವು ಸಂಗ್ರಹಣೆಯನ್ನು ಹೊಂದಿದೆ. ರೂ 1048 ಕೋಟಿ ಸಾಲವನ್ನು ನೀಡಿದೆ. ಹಾಗೂ ನಮ್ಮಲ್ಲಿ 111 ಶಾಖೆಗಳಿಂದ 1198 ಸಿಬ್ಬಂದಿಗಳು ಮತ್ತು 332 ಪಿಗ್ಮಿ ಏಜೆಂಟರುಗಳು ಸೇರಿದಂತೆ ಒಟ್ಟೂ 1530 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಲ್ಲದೇ ಕಳೆದ 8 ವರ್ಷಗಳಿಂದ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿರುತ್ತೇವೆ.

ಅದರಲ್ಲಿ 2016 ರಲ್ಲಿ 9 ಜಿಲ್ಲೆಯ 593 ಫಲಾನುಭವಿಗಳಿಗೆ ⁠2017 ರಲ್ಲಿ 9 ಜಿಲ್ಲೆಯ 26 ಶಾಖೆಗಳ ಒಟ್ಟೂ 1458 ಫಲಾನುಭವಿಗಳಿಗೆ ⁠2018 ರಲ್ಲಿ 9 ಜಿಲ್ಲೆಯ 42 ಶಾಖೆಗಳ ಒಟ್ಟೂ 3126 ಫಲಾನುಭವಿಗಳಿಗೆ  ⁠2019 ರಲ್ಲಿ 9 ಜಿಲ್ಲೆಯ 46 ಶಾಖೆಗಳ ಒಟ್ಟೂ 3254 ಫಲಾನುಭವಿಗಳಿಗೆ ⁠2022 ರಲ್ಲಿ 9 ಜಿಲ್ಲೆಯ 46 ಶಾಖೆಗಳ ಒಟ್ಟೂ 3452 ಫಲಾನುಭವಿಗಳಿಗೆ ⁠2023 ರಲ್ಲಿ 9 ಜಿಲ್ಲೆಯ 46 ಶಾಖೆಗಳ ಒಟ್ಟೂ 3612 ಫಲಾನುಭವಿಗಳಿಗೆ ⁠2024 ರಲ್ಲಿ 9 ಜಿಲ್ಲೆಯ 54 ಶಾಖೆಗಳ ಒಟ್ಟೂ 3664 ಫಲಾನುಭವಿಗಳಿಗೆ ಹಾಗೂ ಪ್ರಸ್ತುತ ವರ್ಷದಲ್ಲಿ ಅಂದರೇ 2025 ರಲ್ಲಿ 9 ಜಿಲ್ಲೆಯ 54 ಶಾಖೆಗಳ ಒಟ್ಟೂ 3797 ಫಲಾನುಭವಿಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫಾದರ್‌ ಪ್ರೇಮಕುಮಾರ, ನಿವೃತ್ತ ಶಿಕ್ಷಣಾಧಿಕಾರಿ ವಿ.ಡಿ. ಮೋಗೇರ್‌, ನಿವೃತ್ತ ಶಿಕ್ಷಕರಾದ ಜಿ.ಟಿ ಬಟ್, ಡೆವಲೆಪಮೆಂಟ್‌ ಮ್ಯಾನೇಜರ್‌ ರೋಹಿತ್‌ ಮೋಗೇರ್‌, ರಿಕವರಿ ಆಫೀಸರ್‌ ತನೋಜಕುಮಾರ ನಾಯ್ಕ, ದೇವೇಂದ್ರ ನಾಯ್ಕ, ಹಾಗೂ  ಶಾಲೆಯ ಮುಖ್ಯಾಧ್ಯಪಕರಾದ ಮಾಲತಿ ಉದ್ಯಾವರ, ಆಯೋಜಕರಾದ ಗೀತಾ ನಾಯ್ಕ, ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ರು. ಶಾರದಾ ನಾಯ್ಕ ಸ್ವಾಗತಿಸಿದ್ರು, ಅಭಿಷೇಕ ಮಾಸ್ತಿಕಟ್ಟೆ ವಂದಿಸಿದ್ರು..