ನವದೆಹಲಿ: ಟಿ20 ವಿಶ್ವಕಪ್ 2026 ರಲ್ಲಿ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಟೀಂ ಇಂಡಿಯಾ ದೆಹಲಿಯಲ್ಲಿ ನಮೀಬಿಯಾ ವಿರುದ್ಧ 2ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಈ ಮಧ್ಯೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಭಿಷೇಕ್ ಶರ್ಮಾ ಹೊಟ್ಟೆಯ ಸೋಂಕಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಗುರುವಾರ ದೆಹಲಿಯಲ್ಲಿ ನಡೆಯಲಿರುವ ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವರು ಆಡುವುದು ಅನುಮಾನ ಎಂದು ವರದಿಗಳು ತಿಳಿಸಿವೆ. ನಮೀಬಿಯಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಅಭ್ಯಾಸ ನಡೆಸಿದೆ. ಈ ವೇಳೆಯೂ ಅಭಿಷೇಕ್ ಶರ್ಮಾ ಗೈರಾಗಿದ್ದರು. ತಂಡದ ಇತರ ಸದಸ್ಯರು ಅಭ್ಯಾಸ ನಡೆಸಿದ್ದಾರೆ.
ಅಭಿ ಹೊಟ್ಟೆಯ ಸೋಂಕಿನಿಂದಾಗಿ ತೀವ್ರ ನೋವಿನಿಂದ ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಮಸ್ಯೆ ಖಚಿತಪಡಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಇಂದು ಅವರು ಡಿಸ್ಚಾರ್ಜ್ ಆಗುತ್ತಾರಾ ಅಥವಾ ಇಲ್ವಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸೂಪರ್ ಸಂಡೆ (ಫೆ.15) ಪಾಕಿಸ್ತಾನ ವಿರುದ್ಧ ಭಾರತ ಕೊಲಂಬೊದಲ್ಲಿ ಸೆಣಸಲಿದೆ.
