ಭಟ್ಕಳದ ತಾಯಿ-ಮಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿ


ಹೊನ್ನಾವರ ಫೆ. 04: ಭಟ್ಕಳ ಮೂಲದ ಈಗ ಗುಜರಾತ್‌ನಲ್ಲಿ ನೆಲೆಸಿರುವ ಶ್ರೀಮತಿ ಶೃತಿ ರವಿ ನಾಯ್ಕ ಮತ್ತು ಋತಿಕಾ ರವಿ ನಾಯ್ಕ ಇವರಿಗೆ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಜನವರಿ 28-31 ರವರೆಗೆ ನಡೆದ ಏಷ್ಯನ್ ನೃತ್ಯ ಸಮ್ಮೇಳನದಲ್ಲಿ ಪ್ರಶಸ್ತಿಗಳು ದೊರೆತಿವೆ. 6 ವರ್ಷದ ಋತಿಕಾ ಮಕ್ಕಳ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾಳೆ.

ಶೃತಿ ಇವರಿಗೆ ಪ್ರಥಮ ಸ್ಥಾನದೊಂದಿಗೆ ನೃತ್ಯ ಅನುಶೃತಿ ಅವಾರ್ಡ್ ದೊರಕಿದೆ. ಇಬ್ಬರಿಗೂ ಅಂತರಾಷ್ಟ್ರೀಯ ನೃತ್ಯಪಟು ಕುಮಾರ ಶರ್ಮಾ ಪ್ರಶಸ್ತಿಗಳನ್ನು ನೀಡಿದ್ದಾರೆ. ರವಿ ನಾಯ್ಕ ಗುಜರಾತ್‌ದಲ್ಲಿ ಉದ್ಯೋಗಿಯಾಗಿದ್ದು ಅವರ ಶ್ರೀಮತಿ ಶೃತಿ ಅಲ್ಲಿ ನೃತ್ಯಪಟುವಾಗಿ ಪ್ರಸಿದ್ಧಿ ಗಳಿಸಿದ್ದು ಹಲವಾರು ಪ್ರಶಸ್ತಿ ಗಳಿಸಿದ್ದಾರೆ. ಮಗಳಿಗೆ ತರಬೇತಿ ನೀಡಿದ್ದಾರೆ. ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.