ಬೆಂಗಳೂರು, ಬಳ್ಳಾರಿ ಗಾಳಿಯ ಗುಣಮಟ್ಟ ಅಪಾಯದಲ್ಲಿ, ಹೈ ಅಲರ್ಟ್​​​​​ ನೀಡಿದ ತಜ್ಞರು

ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ ಮಧ್ಯಮದಿಂದ ಕಳಪೆ ಮಟ್ಟದಲ್ಲಿದೆ. PM2.5 ಮತ್ತು PM10 ಮಾಲಿನ್ಯಕಾರಕಗಳು ಹೆಚ್ಚಿದ್ದು, ಬೆಳ್ಳಂದೂರು, ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ಗಾಳಿ ಗುಣಮಟ್ಟ ಕಳಪೆಯಾಗಿದೆ. ಮಕ್ಕಳು, ವೃದ್ಧರು ಎಚ್ಚರಿಕೆ ವಹಿಸಬೇಕು. ಬಳ್ಳಾರಿ ಮತ್ತು ವಿಜಯಪುರದಲ್ಲೂ ಕಳಪೆ ಗಾಳಿ ಗುಣಮಟ್ಟ ದಾಖಲಾಗಿದೆ.

ನಗರಾದ್ಯಂತ ಗಾಳಿಮಟ್ಟದಲ್ಲಿ ಸರಾಸರಿ ವರದಿಯಾಗಿದೆ. 89 ಮತ್ತು 159 ರ ನಡುವೆ ಈ ಮಟ್ಟ ಇರಲಿದೆ ಎಂದು ಹೇಳಲಾಗಿದೆ. ಇನ್ನು ನೆನ್ನೆ 85ರಷ್ಟು ಇತ್ತು. ಇದು ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಅಪರೂಪದ ಗಾಳಿಯ ಗುಣಮಟ್ಟ. ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಗಾಳಿ ಮಟ್ಟ ತುಂಬಾ ಕಳಪೆ ಇತ್ತು. ಇನ್ನು ಗಾಳಿ ಮಟ್ಟ ಇಳಿಕೆಗೆ PM2.5 ಮತ್ತು PM10 ಪ್ರಮುಖ ಕಾರಣವಾಗಿದ್ದು, PM2.5 ಮಟ್ಟಗಳು ಸುಮಾರು 54 µg/m³ ಆಗಿವೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆಗಳಿರುವವರಂತಹ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳಿದ್ದಾರೆ.