ಸಾಗರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮೂರು ವರ್ಷದ ಸರ್ವಜ್ಞ ಸಿಂಗ್ ಕುಶ್ವಾಹನಿಗೆ FIDE ಶ್ರೇಯಾಂಕ ಅಥವಾ ಗ್ರ್ಯಾಂಡ್‌ಮಾಸ್ಟರ್ ಸ್ಥಾನಮಾನದ ಬಗ್ಗೆ ಏನೂ ತಿಳಿದಿಲ್ಲದಿರಬಹುದು. ಆದರೆ, ಚೆಸ್ ಆಟಗಾರನಾಗಿ ಅವನ ಕೌಶಲ್ಯವನ್ನು ಅಂತಾರಾಷ್ಟ್ರೀಯ ಚೆಸ್ ಒಕ್ಕೂಟವು ಸರಿಯಾಗಿ ಗುರುತಿಸಿದೆ.

3 ವರ್ಷ, 7 ತಿಂಗಳು ಮತ್ತು 20 ದಿನಗಳ ವಯಸ್ಸಿನಲ್ಲಿ ಸಾಗರ್ ಜಿಲ್ಲೆಯಲ್ಲಿ ವಾಸಿಸುವ ಸರ್ವಜ್ಞ, ಅಂತಾರಾಷ್ಟ್ರೀಯ ಚೆಸ್ ಒಕ್ಕೂಟದಿಂದ ಶ್ರೇಯಾಂಕ ಪಡೆದ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿದ್ದಾನೆ. ಈ ಬಾಲಕ FIDE ಶ್ರೇಯಾಂಕದಲ್ಲಿ 1572 ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಈ ದಾಖಲೆಯನ್ನು ಪಶ್ಚಿಮ ಬಂಗಾಳದ ಅನೀಶ್ ಸರ್ಕಾರ್ ಹೊಂದಿದ್ದರು. ಈ ಬಾಲಕ 3 ವರ್ಷ ಮತ್ತು 8 ತಿಂಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.

ಮೂವರು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಸೋಲಿಸಿದ ಸರ್ವಜ್ಞ: ಸರ್ವಜ್ಞನ ಪೋಷಕರು ಮತ್ತು ಕುಟುಂಬದವರು ಅವನ ಸಾಧನೆಯಿಂದ ಸಂತಸಗೊಂಡಿದ್ದಾರೆ. ಆತ ಗ್ರ್ಯಾಂಡ್‌ಮಾಸ್ಟರ್ ಆಗುವುದನ್ನು ನೋಡಲು ಕಾತರರಾಗಿದ್ದಾರೆ. FIDE ಶ್ರೇಯಾಂಕವನ್ನು ಸಾಧಿಸಲು, ಅಂತಾರಾಷ್ಟ್ರೀಯ ಆಟಗಾರರನ್ನು ಸೋಲಿಸಬೇಕು. ಸರ್ವಜ್ಞ ಅಲ್ಪಾವಧಿಯಲ್ಲಿಯೇ ಮೂವರು ಅಂತಾರಾಷ್ಟ್ರೀಯ ಮಟ್ಟದ ಚೆಸ್ ಆಟಗಾರರನ್ನು ಸೋಲಿಸಿ, ಈ ಪ್ರತಿಷ್ಠಿತ ಶ್ರೇಯಾಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚೆಸ್ ಆಟಗಾರನಾಗಿದ್ದು ಹೇಗೆ?: ಆರಂಭದಲ್ಲಿ ಸರ್ವಜ್ಞನ ಪೋಷಕರು ಸ್ಮಾರ್ಟ್‌ಫೋನ್‌ಗಳಿಂದ ದೂರವಿರಲು ಅವನಿಗೆ ಚೆಸ್‌ನಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಆ ಹುಡುಗ ಚೆಸ್ ಕರಗತ ಮಾಡಿಕೊಂಡಿದ್ದಾನೆ. ಕೆಲವು ದಿನಗಳ ತರಬೇತಿಯ ನಂತರ, ಈ ಪುಟ್ಟ ಬಾಲಕ ಚೆಸ್ನ ಪಟ್ಟುಗಳನ್ನು ಕರಗತ ಮಾಡಿಕೊಳ್ಳಲು ಆರಂಭಿಸಿದನು. ಅವನ ಪೋಷಕರು ಮಗುವಿನ ಚೆಸ್ ಕಲಿಕೆಗೆ ಅಗತ್ಯವಾದ ನೆರವನ್ನು ನೀಡಿದರು. ವೈಯಕ್ತಿಕ ತರಬೇತುದಾರರೊಬ್ಬರನ್ನು ವ್ಯವಸ್ಥೆ ಮಾಡಿದರು. ಮತ್ತು ಆನ್‌ಲೈನ್ ತರಬೇತಿಯನ್ನು ಸಹ ನೀಡಿದರು. ಅಲ್ಲಿಂದ ಸರ್ವಜ್ಞ ಎಂದಿಗೂ ಹಿಂತಿರುಗಿ ನೋಡಲಿಲ್ಲ. ಕೇವಲ 6 ತಿಂಗಳ ತರಬೇತಿಯ ನಂತರ ಅವನು FIDE ಶ್ರೇಯಾಂಕದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.

