ಬಿಹಾರ ಗೆಲುವು: ರೂಪಾಲಿ ಎಸ್. ನಾಯ್ಕ ಸಂತಸ


ಕಾರವಾರ: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದ ಬಗ್ಗೆ‌ ಸಂತಸ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ, ಇದೊಂದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ.

ಬಿಹಾರದಲ್ಲಿ ದಾಖಲೆ ವಿಜಯ ಕೊಟ್ಟಂತ ಬಿಹಾರದ ಜನತೆಗೆ ಅಭಿನಂದನೆಗಳು. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಬಂದ ವಿಜಯ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಡಳಿತಕ್ಕೆ ಬಹಳ ದೊಡ್ಡ ಜನ ಬೆಂಬಲದ ಮುದ್ರೆ ಬಿಹಾರದ ಜನ ಕೊಟ್ಟಿದ್ದಾರೆ.