ಸರ್ದಾರ್ ಪಟೇಲರ ಜಯಂತಿ, ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ ಅರ್ಪಣೆ

ಅಹಮದಾಬಾದ್, ಅಕ್ಟೋಬರ್ 31: ಭಾರತದ ಏಕೀಕರಣದ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಪಟೇಲ್ ಅವರ ರಾಷ್ಟ್ರೀಯ ಏಕತೆ, ಉತ್ತಮ ಆಡಳಿತ ಮತ್ತು ಜನಸೇವೆಗಾಗಿ ತೋರಿದ ನಿಷ್ಠೆ ಯುವ ಪೀಳಿಗೆಗೆ ಶಾಶ್ವತ ಸ್ಫೂರ್ತಿ ಎಂದಿದ್ದಾರೆ. ಈ ಸಂದರ್ಭ ಪ್ರಧಾನಿ ಮೋದಿ ಅವರು ಹಾಜರಿದ್ದವರಿಗೆ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು. ನಂತರ ಪೊಲೀಸರು ಹಾಗೂ ಅರೆಸೈನಿಕ ಪಡೆಯವರಿಂದ ಪರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಿತು.