ಭಾರತ-ಪಾಕ್ ಯುದ್ಧವನ್ನು ನಿಲ್ಲಿಸಲು 200% ತೆರಿಗೆ ಬೆದರಿಕೆ ಹಾಕಿದ್ದೇನೆ – ಡೊನಾಲ್ಡ್ ಟ್ರಂಪ್ 

ವಾಷಿಂಗ್ಟನ್, ಅಕ್ಟೋಬರ್ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನು ನಿಲ್ಲಿಸಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಇದೇ ಕುರಿತು ಮೊದಲೇ ಟ್ರಂಪ್ ಹೇಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ನಿರಾಕರಿಸಿದ್ದರು. ಆದರೆ ಟ್ರಂಪ್ ತಮ್ಮ ಹೇಳಿಕೆಯಲ್ಲಿ ಬದಲಾವಣೆ ಮಾಡಿರಲಿಲ್ಲ. ಇದೀಗ ಅವರು ಮತ್ತೊಂದು ಹೇಳಿಕೆಯಲ್ಲಿ, “ಹೆಚ್ಚಿನ ತೆರಿಗೆ ವಿಧಿಸುವ ಬೆದರಿಕೆ ಮೂಲಕ ಭಾರತ-ಪಾಕ್ ಯುದ್ಧವನ್ನು ನಾನೇ ತಡೆಯಿಸಿದ್ದೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.