ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಜೈಲಿಗೆ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕ್‌ನಲ್ಲಿ ಗಾಂಜಾ ಮತ್ತು ಸಿಗರೇಟು ತರುವ ಯತ್ನದಲ್ಲಿ ಇಬ್ಬರು ಯುವಕರು ಬಂಧಿತರಾಗಿದ್ದಾರೆ.

ಬಂಧಿತರನ್ನು ಭದ್ರಾವತಿ ನಿವಾಸಿ ರಾಹಿಲ್ (19) ಮತ್ತು ತಸೀರುಲ್ಲಾ (19) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 4:30ರ ಸುಮಾರಿಗೆ ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಅವರ ಸಂದರ್ಶನಕ್ಕೆಂದು ಈ ಇಬ್ಬರು ಮೂರು ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತರಿದ್ದರು. ಅನುಮಾನಗೊಂಡ ಜೈಲು ಸಿಬ್ಬಂದಿ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ, ಕಪ್ಪು ಗಮ್ ಟೇಪ್‌ನಲ್ಲಿ ಸುತ್ತಿದ ವಸ್ತುಗಳು ಪತ್ತೆಯಾಗಿದ್ದು, ತಪಾಸಣೆಯಲ್ಲಿ 1 ಗಾಂಜಾ ಪ್ಯಾಕೆಟ್ ಮತ್ತು 2 ಸಿಗರೇಟು ಪ್ಯಾಕೆಟ್‌ಗಳು ಸಿಕ್ಕಿವೆ ಎಂದು ದೃಢಪಟ್ಟಿದೆ.
ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡ ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಕೇಂದ್ರ ಜೈಲು ಅಧೀಕ್ಷಕ ಡಾ. ರಂಗನಾಥ್ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿತ ಯುವಕರನ್ನು ವಿಚಾರಣೆಗಾಗಿ ಒಳಪಡಿಸಿದ್ದಾರೆ.
