ಚೀನಾ ಮೇಲೆ 100% ಸುಂಕ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕವನ್ನು ಘೋಷಿಸಿದ್ದಾರೆ. ಟ್ರಂಪ್ ಶೃಂಗಸಭೆ ರದ್ದು ಮಾಡಲಾಗುವುದಾಗಿ ತಿಳಿಸಿದ್ದಾರೆ ಮತ್ತು ಭೂಮಿಯ ಅಪರೂಪದ ಖನಿಜಗಳ ರಫ್ತಿಗೆ ಸಂಬಂಧಿಸಿದ ಚೀನಾ–ಅಮೆರಿಕ ವ್ಯಾಪಾರ ಯುದ್ಧವನ್ನು ಪುನಃ ಪ್ರಾರಂಭಿಸಿದ್ದಾರೆ. ಚೀನಾ ಕೈಗೊಂಡ ಕೆಲವು ಅಸಾಧಾರಣ ಕ್ರಮಗಳಿಗೆ ಪ್ರತಿಕಾರವಾಗಿ, ಎಲ್ಲಾ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲಿನ ಹೆಚ್ಚುವರಿ ಸುಂಕ ನವೆಂಬರ್ 1ರಿಂದ ಜಾರಿಗೆ ಬರುತ್ತದೆ. ಯುಎಸ್‌ ರಫ್ತು ನಿಯಂತ್ರಣಗಳು ಸಹ ಜಾರಿಯಾಗಲಿವೆ ಎಂದು ಟ್ರಂಪ್‌ ತಮ್ಮ ಟ್ರೂತ್‌ ಸೋಷಿಯಲ್‌ನಲ್ಲಿ ತಿಳಿಸಿದ್ದಾರೆ.

ಅಮೆರಿಕ–ಚೀನಾ ವ್ಯಾಪಾರ ಯುದ್ಧ ಮತ್ತೆ ಭುಗಿಲೆದ್ದಂತೆ ಷೇರು ಮಾರುಕಟ್ಟೆಗಳು ಕುಸಿತ ಕಂಡಿವೆ. ನಾಸ್ಡಾಕ್ ಶೇ.3.6 ರಷ್ಟು, ಎಸ್ & ಪಿ 500 ಶೇ.2.7 ರಷ್ಟು ಕುಸಿದಿದೆ. ಚೀನಾದ ಸರಕುಗಳು ಈಗ ಯುಎಸ್‌ನಲ್ಲಿ ಶೇ.30 ರಷ್ಟು ಸುಂಕ ಎದುರಿಸುತ್ತಿವೆ.