ಉಡುಪಿ: ಎಸ್‌ಡಿಪಿಐ ಮುಖಂಡ ರಿಯಾಜ್ ಕಡಂಬುಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಯನ್ನು ಹಿರಿಯಡ್ಕ ಸಬ್ ಜೈಲ್‌ಗೆ ರವಾನಿಸಲಾಗಿದೆ. ಇದು ಸಂಘಪರಿವಾರದ ವಿರುದ್ಧ ದ್ವೇಷ ಭಾಷಣ ನಡೆಸಿದ್ದಕ್ಕೆ ಸಂಬಂಧಪಟ್ಟ ಶಿಕ್ಷೆ. ಜುಲೈನಲ್ಲಿ ಬ್ರಹ್ಮಾವರ ತಾಲ್ಲೂಕಿನ ಕುಂಜಾಲು ಬಳಿ ದನದ ತಲೆ ಪತ್ತೆಯಾಗಿತ್ತು. ರಿಯಾಜ್ ಕಡಂಬು ಇದನ್ನು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿದ್ದರು.

ಜುಲೈ 15 ರಂದು ಉಡುಪಿ ನಗರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿತ್ತು. ಜಾಮೀನು ನಿಯಮ ಉಲ್ಲಂಘನೆ ಮಾಡಿರುವುದರಿಂದ, ಕೋರ್ಟ್ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

