ಶಿವಮೊಗ್ಗ: ನಗರದಲ್ಲಿ ಸಂಭ್ರಮದ ದಸರಾ ಆಚರಣೆ ಜರುಗುತ್ತಿದೆ. ಜಂಬೂಸವಾರಿ ಭಾಗವಹಿಸಲು ಸಕ್ರೆಬೈಲಿನಿಂದ ಗಜಪಡೆ ಆಗಮಿಸಿದೆ. ಮೂರು ಆನೆಗಳು ಶಿವಮೊಗ್ಗಕ್ಕೆ ಬಂದಿದ್ದು, ಗಜಪಡೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮತ್ತು ಆಯುಕ್ತ ಮಾಯಣ್ಣಗೌಡ ಆರತಿ ಎತ್ತಿ ಸ್ವಾಗತ ಸಲ್ಲಿಸಿದ್ದಾರೆ.

ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಗಜಪಡೆ ತಾಲೀಮು ಈಗ ಆರಂಭಗೊಂಡಿದ್ದು, ದಸರಾ ಕೊನೆಯ ದಿನ ಅದ್ದೂರಿ ಜಂಬೂಸವಾರಿ ನಡೆಯಲಿದೆ. ಸಾಗರ್ ಆನೆ ಅಂಬಾರಿಯೊಂದಿಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಹ ಭಾಗಿಯಾಗಲಿವೆ. 650 ಕೆಜಿ ತೂಕದ ಬೆಳ್ಳಿಯ ಅಂಬಾರಿಯಲ್ಲಿ ನಾಡದೇವಿ ಚಾಮುಂಡಿಯನ್ನು ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ.

ಶಿವಮೊಗ್ಗ ದಸರಾಗೆ “ರಾಜ್ಯದ ಎರಡನೇ ಅತಿದೊಡ್ಡ ದಸರಾ” ಎಂಬ ಖ್ಯಾತಿ ಇದೆ. ಮಹಾನಗರ ಪಾಲಿಕೆ ಹೇಳಿಕೆಯ ಪ್ರಕಾರ, ಈ ಭಾರಿ ಜಂಬೂಸವಾರಿ ನೋಡಲು ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

