ಅಕ್ಕ-ಬಾವನ ಜೊತೆ ಗಲಾಟೆ: ಬಿಗ್ ಬಾಸ್ ಖ್ಯಾತಿ ರಂಜಿತ್ ವಿರುದ್ಧ ದೂರು

ಬೆಂಗಳೂರು: ಬಿಗ್ ಬಾಸ್‌ನಲ್ಲಿ ಖ್ಯಾತಿ ಪಡೆದ ರಂಜಿತ್ ವಿರುದ್ಧ ಅಕ್ಕ ಮತ್ತು ಬಾವನ ನಡುವೆ ನಡೆದ ವಿವಾದದ ಪರಿಣಾಮವಾಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ದೂರು ಜಗದೀಶ್ ಅವರು ದೂರು ನೀಡಿದ್ದು ಪೊಲೀಸರು ಎನ್‌ಸಿಆರ್‌ ದಾಖಲಿಸಿದ್ದಾರೆ.

ಏನಿದು ಗಲಾಟೆ?

2018ರಿಂದ ಅಮೃತಹಳ್ಳಿಯ ಫ್ಲ್ಯಾಟ್‌ನಲ್ಲಿ ಜಗದೀಶ್ ಕುಟುಂಬ ವಾಸವಾಗುತ್ತಿತ್ತು. ಆದರೆ 2025ರಲ್ಲಿ ಅದೇ ಫ್ಲ್ಯಾಟ್‌ನಲ್ಲಿ ರಂಜಿತ್ ಅಕ್ಕ-ಬಾವನೊಂದಿಗೆ ವಾಸಿಸಲು ಬಂದರು. ಮನೆ ಯಾರದು ಎಂಬ ವಿಚಾರದಲ್ಲಿ ಅಕ್ಕ-ತಮ್ಮನ ನಡುವೆ ಗಲಾಟೆ ಆರಂಭವಾಯಿತು.

ಈ ವೇಳೆ ರಂಜಿತ್, ಅವರ ಪತ್ನಿ ಹಾಗೂ ಅಕ್ಕ ನಡುವೆ ಬಿಕ್ಕಟ್ಟು ತೀವ್ರಗೊಂಡು ಪರಸ್ಪರ ಬೈದಾಡಿ ಹಲ್ಲೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. “ಈ ಮನೆ ನನ್ನದೇ, ನಾನು ಬಿಡುವುದಿಲ್ಲ” ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಾದ ಬೆನ್ನಲ್ಲೇ ರಂಜಿತ್‌ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು ಎಂದು ಹೇಳಿ ನ್ಯಾಯಾಲಯದಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ.