ಹೊನ್ನಾವರ ಸೆ.17 : ಹಳದೀಪುರದಲ್ಲಿ ಮಾದರಿಯ ದೇಶಿ-ವಿದೇಶಿ ಹಣ್ಣು-ಹಂಪಲು ಬೆಳೆದು ಪ್ರಸಿದ್ಧರಾಗಿರುವ ಜಯಪ್ರಕಾಶ್ ಆಳ್ವೆ ಮತ್ತು ಪ್ರೇರಣಾ ಇವರ ಮಕ್ಕಳಾದ ರಜತ್ ಮತ್ತು ಪ್ರಿಯಾಂಕಾ ದೇಶದ 30 ಪ್ರಸಿದ್ಧ ಆಹಾರ ತಜ್ಞರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.

(ಶೆಫ್) ಬೆಂಗಳೂರು ಕಲ್ಯಾಣನಗರದಲ್ಲಿ ಒಂದು ವರ್ಷದ ಹಿಂದೆ ಫಯರ್ ಸೈಡ್ ಎಂಬ ಹೊಟೆಲ್ ನಡೆಸುತ್ತಿರುವ ಈ ಅಣ್ಣ-ತಂಗಿ ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೊಸದಾದ ಆಹಾರ ತಜ್ಞರನ್ನು ಗುರುತಿಸುವ ಸಂಘಟನೆ ಇವರಿಗೆ ತಿಳಿಯದಂತೆ ಹಲವು ಬಾರಿ ಇವರ ಆಹಾರ ತಯಾರಿಕೆ ವಿಧಾನ ಮತ್ತು ರುಚಿಯನ್ನು ಸವಿದಿತ್ತು. ಇವರ ಫಯರ್ ಸೈಡ್ ಹೊಟೆಲ್ ಕುರಿತು ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಗಳಲ್ಲಿ ಸುದ್ದಿ, ಲೇಖನಗಳು ಪ್ರಕಟವಾಗಿವೆ.

ತುಂಬ ಎಂಜಿನೀಯರ್ ಇವರು ಹವ್ಯಾಸಿ ಶೆಫ್ ಆಗಿ ವೃತ್ತಿ ಆರಂಭಿಸಿ, ತರಬೇತಿ ಪಡೆದು ಈಗ ಪೂರ್ಣಾವಧಿ ವ್ಯವಸಾಯಿಗಳಾಗಿ ಬೆಂಗಳೂರಿನಂತಹ ಶಹರದಲ್ಲಿ ಮಿಂಚುತ್ತಿದ್ದು ಇದೇ ದಿ. 26 ರಂದು ಕಲ್ಕತ್ತಾದಲ್ಲಿ ನಡೆಯುವ ಫುಡ್ ಸೂಪರ್ ಸ್ಟಾರ್ ನೆಕ್ಸ್ಟ್ 30ಕ್ಕೆ ಆಯ್ಕೆಯಾಗಿ ಭಾಗವಹಿಸಲಿದ್ದಾರೆ. ಉತ್ತರಕನ್ನಡಕ್ಕೆ ಕೀರ್ತಿ ತಂದ ಇವರನ್ನು ಅಭಿನಂದಿಸೋಣ.


