ತುಮಕೂರು: ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ತುಮಕೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಇಂದ್ರಕುಮಾರ್, ಪತ್ನಿ ನಳಿನಾ ಇಂದ್ರಕುಮಾರ್ ಹಾಗೂ ಪುತ್ರ ಯಶಸ್ವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತ ಯುವತಿಯ ಪ್ರಕಾರ, ಮಾಜಿ ಕಾರ್ಪೊರೇಟರ್ ದಂಪತಿ ಪುತ್ರ ಯಶಸ್ವಿ ಪ್ರೀತಿಯ ಹೆಸರಿನಲ್ಲಿ ಮದುವೆಯಾಗಿದ್ದಾನೆ.ಆದರೆ ಬಳಿಕ ಆಕೆಗೆ ನಿರಂತರ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾನೆ. ಮತ್ತೊಬ್ಬ ಯುವತಿಯನ್ನು ಮದುವೆಯಾಗುವ ಯೋಜನೆ ರೂಪಿಸಿದ್ದಾನೆ ಎಂಬ ಗಂಭೀರ ಆರೋಪ ಕೂಡ ಇದೆ.ಇದೇ ವೇಳೆ, ಆರೋಪಿ ಯಶಸ್ವಿ ತನ್ನ ಚಿನ್ನಾಭರಣವನ್ನು ದೋಚಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಆದ ಬಳಿಕ ಅತ್ತೆ, ಮಾವ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೆ ದೂರು ನೀಡಿದರೆ ಖಾಸಗಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಆರೋಪವನ್ನೂ ಸಂತ್ರಸ್ತೆ ಹೊರಿಸಿದ್ದಾರೆ. ಘಟನೆ ಸಂಬಂದ ದಾಂಪತ್ಯದ ಕಾನೂನು ಉಲ್ಲಂಘನೆ, ಹಲ್ಲೆ, ಬೆದರಿಕೆ, ಶಾಂತಿ ಭಂಗ ಮಾಡುವ ಉದ್ದೇಶದಿಂದ ಅವಮಾನ ಸಂಬಂಧ ಬಿಎನ್‌ಎಸ್‌ಎಸ್ ಅಡಿ ತುಮಕೂರು ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ದಂಪತಿ ಹಾಗೂ ಪುತ್ರ ನಾಪತ್ತೆಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
