ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಶರಣರ ನಾಡು ಕಲಬುರಗಿಯ ಮಹಾದಾಸೋಹಿ, ಕಲಬುರಗಿ ಜನರ ಆರಾಧ್ಯ ದೈವ ಶ್ರೀ ಶರಣಬಸಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ತಮ್ಮ ಕೊನೆಯಾಸೆಯಂತೆ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರೆಳೆದಿದ್ದಾರೆ.

90 ವರ್ಷದ ಶರಣಬಸಪ್ಪ ಅಪ್ಪ ಅವರು ಹಲವು ದಿನಗಳಿಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸಂಜೆ ಸುಮಾರು 7:30ಕ್ಕೆ ಅಪ್ಪಾಜಿಯವರನ್ನು ದಾಸೋಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತಾತ್ಕಾಲಿಕ ಐಸಿಯು ಸಿದ್ಧಪಡಿಸಲಾಗಿತ್ತು. ಅಂತಿಮ ಉಸಿರಿನವರೆಗೂ ಸಮರ್ಪಿತ ವೈದ್ಯಕೀಯ ತಂಡದ ಕಾಳಜಿಯಲ್ಲಿ ಎಲ್ಲಾ ಚಿಕಿತ್ಸಾ ಮತ್ತು ಸಹಾಯಕ ಔಷಧೋಪಚಾರಗಳನ್ನು ಮುಂದುವರೆಸಲಾಯಿತು. ರಾತ್ರಿ 9:23ಕ್ಕೆ ಮಹಾಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದಲ್ಲಿಯೇ ಅಂತಿಮ ಉಸಿರೆಳೆದರು.

ಇನ್ನೂ ಶರಣಬಸಪ್ಪ ಅಪ್ಪ ಅವರ ನಿಧನ ವಿಚಾರ ತಿಳಿಯುತ್ತಿದ್ದಂತೆ ಇಲ್ಲಿನ ಭಕ್ತರು ಮಠಕ್ಕೆ ದೌಡಾಯಿಸಿ ಕಂಬನಿ ಮಿಡಿದಿದ್ದಾರೆ. ಇನ್ನು ಸಿಎಂ ಸಿದ್ದರಾಮುಯ್ಯ ಸೇರಿ ಅನೇಕ ಗಣ್ಯರು ಅಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.



