ಹೊನ್ನಾವರ ಆ.11 : ತಾಲೂಕಿನ ಮುಗ್ವಾದಲ್ಲಿ ಕಾಡುಹಂದಿ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅರಣ್ಯಾಧಿಕಾರಿಗಳನ್ನು ನೋಡಿ ಆರೋಪಿಗಳು ಗಾಡಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ..

ಕವಲಕ್ಕಿ ನಾಕಾದಿಂದ ವಾಹನ ಬೆನ್ನಟ್ಟಿ ಬಂದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯ ಅಧಿಕಾರಿ ವಿಶಾಲ್ ದುಮ್ಮಗೋಳ ವಾಚ್ ಮೆನ್ ಶ್ರೀಧರ್ ಸುಬ್ರಾಯ ಭಟ್ಟ ಕಾರ್ಯಾಚರಣೆ ನಡೆಸಿದ್ದಾರೆ. ವಾಹನದಲ್ಲಿ ಇಬ್ಬರು ಆರೋಪಿತರು ಇದ್ದರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 50 ರಿಂದ 60 ಕೆಜಿ ಕಾಡು ಹಂದಿಮಾಂಸ ಇರುವ ಸಾಧ್ಯತೆ ಇದೆ ಎನ್ನಲಾಗಿದೆ..
ಪ್ಲಾಸ್ಟಿಕ್ ಚೀಲದಲ್ಲಿ ಅಂದಾಜು ಒಂದು ಕೆಜಿ, ಎರಡು ಕೆಜಿ ಮಾದರಿಯಲ್ಲಿ ಪ್ಯಾಕೆಟ್ ಪತ್ತೆಯಾಗಿದೆ. ಹಂದಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಕದ್ದೊಯ್ಯುತ್ತಿರುವಾಗ ಅನುಮಾನ ಬಂದಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ..ಈ ವೇಳೆ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ರಸ್ತೆ ಬದಿ ನಿಲ್ಲಿಸಿಟ್ಟ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ ಪರಿಣಾಮ ಬೈಕ್ ಮುಂಭಾಗ ಜಖಂಗೊಂಡಿದೆ.
ತಾಲೂಕಿನ ಮೂಡ್ಕಣಿಗೆ ಸಂಬಂಧಿಸಿದ ವಾಹನ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ವಾಹನದ ಮಾಲೀಕನನ್ನು ಆರ್ ಎಫ್ ಓ ಸವಿತಾ ದೇವಾಡಿಗ ವಶಕ್ಕೆ ಪಡೆದಿದ್ದಾರೆ. ಎಸ್ ಸಿ ಎಫ್ ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಾರಿಯಾದ ಆರೋಪಿಗಳಿಗಾಗಿ ತನಿಖೆ ಆರಂಭಿಸಿದ್ದಾರೆ..


