ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್ ಹಳ್ಳಿ ಗೇಟ್ ಬಳಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಸುಮಾರು 5 ಕಿಲೋ ಮೀಟರ್‌ವರೆಗೂ ವಾಹನಗಳು ನಿಂತಲ್ಲೇ ನಿಂತಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಆದಿವಾಲದಿಂದ ಗೊರ್ಲಡಕು ಗೇಟ್ ಮುಂದೆ ಜವನಗೊಂಡನಹಳ್ಳಿಯಿಂದ ಶಿರಾ ತಲುಪುವವರೆಗೆ ಜಾಮ್ ಉಂಟಾಗಿದೆ. ಟ್ರಾಫಿಕ್ ಹಿನ್ನೆಲೆ ಬೆಂಗಳೂರಿಗೆ ತೆರಳುವವರು ಮಾರ್ಗ ಬದಲಿಸುವುದು ಉತ್ತಮ.
ಕೆಆರ್ ಹಳ್ಳಿ ಬಳಿ ಫ್ಲೈಓವರ್ ನಿರ್ಮಾಣ ಹಿನ್ನೆಲೆ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿದೆ. ಕಿರಿದಾದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಉಂಟಾಗಿದೆ. ಟ್ರಾಫಿಕ್‌ನಲ್ಲಿ ಸಿಲುಕಿದ ವಾಹನ ಸವಾರರು ಕಂಗಾಲಾಗಿದ್ದಾರೆ. ಭಾನುವಾರ ರಾತ್ರಿ ಕೂಡ ಇದೇ ಸಮಸ್ಯೆ ತಲೆದೋರಿತ್ತು.

