ಕೋಲಾರ: ಏಕಾಏಕಿ ಸುಮಾರು 100 ವರ್ಷ ಹಳೆಯದಾದ ಬೃಹದಾಕಾರದ ಮರ ಮುರಿದು ಬಿದ್ದು ಇಬ್ಬರು ಸಾವನ್ನಪ್ಪಿ ಓರ್ವ ಗಾಯಗೊಂಡಿರುವ ಘಟನೆ ಕೋಲಾರ ತಾಲೂಕು ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ.
ಕ್ಯಾಲನೂರು ಗ್ರಾಮದ ಕೆಇಬಿ ಎದುರಿಗಿದ್ದ ಹಳೆಯ ಮರ ಇದಾಗಿದ್ದು ಮರದ ಕೆಳಗೆ ನಿಂತಿದ್ದ ನಾರಾಯಣಪ್ಪ ಹಾಗೂ ಜಮ್ ಶೀರ್ ಸಾವನ್ನಪ್ಪಿದ್ದಾರೆ. ಇನ್ನು ಕಡಗಟ್ಟೂರು ಸಿದ್ದಪ್ಪ ಎಂಬುವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.