
ಹೊನ್ನಾವರ ಜು. 28: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಒಳ್ಳೆಯ ಮಳೆ ಸುರಿಯುತ್ತಿದ್ದು 28,934 ಕ್ಯುಸೆಕ್ಸ್ ನೀರು ಆಣೆಕಟ್ಟಿಗೆ ಹರಿದು ಬರುತ್ತಿದೆ. ಮಳೆಗಾಲ ಆರಂಭವಾದ ಮೇಲೆ 40-20 ಸಾವಿರ ಕ್ಯುಸೆಕ್ಸ್ ಅಂತರದಲ್ಲಿ ನೀರು ಬರುತ್ತಿರುವುದರಿಂದ ಆಣೆಕಟ್ಟು ಭರ್ತಿಯಾಗಲು ಇನ್ನು ಕೇವಲ ೮ ಅಡಿ ಬಾಕಿಯಿದೆ.

ಇನ್ನು 5ಅಡಿ ತುಂಬುವಷ್ಟರಲ್ಲಿ ಮಳೆಯನ್ನು ಅವಲಂಬಿಸಿ ಸ್ವಲ್ಪ ಸ್ವಲ್ಪ ನೀರು ಬಿಡಬೇಕಾಗುತ್ತದೆ. 3 ಅಡಿ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಹಿಂದಿನ ಲೆಕ್ಕದಂತೆ ದಿನಕ್ಕೆ ಒಂದು ಅಡಿ ತುಂಬಿದರೆ ಅಗಸ್ಟ್ ೨ ಕ್ಕೆ ನೀರು ಬಿಡುಗಡೆ ಮಾಡಬೇಕಾಗಬಹುದು. ಆಣೆಕಟ್ಟಿನ ಜಲಮಟ್ಟ ಶೇ. 82 ತುಂಬಿದ್ದು ಇನ್ನು 3 ಅಡಿ ಅಂದರೆ ಶೇ. 85 ತುಂಬಿದ ಕೂಡಲೇ ನೀರು ಬಿಡುವ ಅಂತಿಮ ನೋಟೀಸು ಪ್ರಕಟವಾಗಲಿದೆ. ಈಗಲೇ ಜೋಗ್ ನೋಡಿ ಅಸಂಖ್ಯ ಜನ ಸಂಭ್ರಮಿಸುತ್ತಿದ್ದಾರೆ. ಹಿಂದೆ ನೋಡಿದವರು ನೀರು ಬಿಟ್ಟ ಮೇಲಿನ ವೈಭವ ನೋಡಲು ಕಾದಿದ್ದಾರೆ. ಗೇರುಸೊಪ್ಪದಿಂದ ಹೊನ್ನಾವರದವರೆಗಿನ 35 ಕಿ.ಮೀ. ಶರಾವತಿ ದಂಡೆಯ ಎಡಬಲದ ಜನ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ.ಫೋಟೋ:

