ಶಿರಸಿ ಜು.24 : ತಾಲ್ಲೂಕಿನ ಹೋಂ ಸ್ಟೇ ಒಂದರಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ 49.50 ಲಕ್ಷ ರೂ.ನಗದು ವಶಪಡಿಸಿಕೊಂಡ ಘಟನೆ ನಡೆದಿದೆ.

ಈ ಘಟನೆ ಸಂಬಂಧ ಹಾವೇರಿ, ಶಿವಮೊಗ್ಗ, ದಾವಣಗೇರೆಯ 19 ಜನರನ್ನು ಬಂಧಿಸಲಾಗಿದೆ. ಯಲ್ಲಾಪುರ ರಸ್ತೆಯ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸಾಲ ಗ್ರಾಮದ ವಿ.ಆರ್.ಆರ್. ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಜೂಜಾಟ ಆಡುವ ವೇಳೆ ಪೊಲೀಸರಯ ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಡಿಎಸ್ಪಿ ಗೀತಾ ಪಾಟೀಲ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳ ಜತೆ 7 ಕಾರ್ ಹಾಗೂ 20ಕ್ಕೂ ಹೆಚ್ಚಿನ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ವೇಳೆ ಸಿಕ್ಕ ನಗದು ಮೊತ್ತವು ಈವರೆಗೆ ತಾಲ್ಲೂಕಿನಲ್ಲಿ ನಡೆದ ದಾಳಿ ವೇಳೆ ಸಿಕ್ಕ ಉಳಿದೆಲ್ಲ ಮೊತ್ತಕ್ಕಿಂತ ಹೆಚ್ಚಿನದಾಗಿದೆ ಎನ್ನಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


