ಕೆಸಿಇಟಿ  ಪರೀಕ್ಷೆಯಲ್ಲಿ ಮೀಯಾರ್ಡ್ಸ ಸಂಸ್ಥೆಯ ಚಂದನ‌ ಪಿಯು ಕಾಲೇಜಿನ ಗಮನಾರ್ಹ ಸಾಧನೆ

ಶಿರಸಿ ಮೇ 26: ನಗರದ ಮೀಯಾರ್ಡ್ಸ ಸಂಸ್ಥೆಯ ಚಂದನ‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಬಿ ಎನ್ ವಾಯ್ ಎಸ್, ಬಿ ಫಾರ್ಮ, ಡಿ ಫಾರ್ಮ ಮುಂತಾದ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆದ ಕೆಸಿಇಟಿ  ಪರೀಕ್ಷೆಯಲ್ಲಿ ಹಿಂದಿನ ವರ್ಷದಂತೆ ಈ ವರ್ಷವೂ ಸಹ ಗಮನಾರ್ಹ ಸಾಧನೆ ಮಾಡಿದ್ದಾರೆ.

ಚಂದನ ಕಾಲೇಜಿನ  ಅನುಭವಿ ಶಿಕ್ಷಕರ ಅಡಿಯಲ್ಲಿ ತರಬೇತಿ ಪಡೆದು ಕೆಸಿಇಟಿ 2025 ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳಲ್ಲಿ ಕನ್ನಿಕಾ ಭಟ್ಟ ಕೃಷಿ ವಿಜ್ಞಾನದಲ್ಲಿ 879 ನೇ ಸ್ಥಾನ, ಬಿ ಎನ್ ವಾಯ್ ಎಸ್ ನಲ್ಲಿ 1495 ನೇ ಸ್ಥಾನ, ಎಂಜಿನಿಯರಿಂಗ್ ವಿಭಾಗದಲ್ಲಿ 2828 ನೇ ಸ್ಥಾನ,  ವೇಣುಗೋಪಾಲ್ ಎ ಬಿ ಎಂಜಿನಿಯರಿಂಗ್ ನಲ್ಲಿ 1737 ನೇ ಸ್ಥಾನ, ವಿಐಟಿಇಇ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 3405 ನೇ ಸ್ಥಾನ, ನಮನ್ ಹೆಗ್ಡೆ ಎಂಜಿನಿಯರಿಂಗ್ ನಲ್ಲಿ 3529 ನೇ ಸ್ಥಾನ, ಕೃಷಿ ವಿಜ್ಞಾನದಲ್ಲಿ 3420 ನೇ ಸ್ಥಾನ,  ತೇಜಸ್ವಿ ಪೈ ಕೃಷಿ ವಿಜ್ಞಾನದಲ್ಲಿ ಎಂಜಿನಿಯರಿಂಗ್ ನಲ್ಲಿ 3821 ನೇ, 3086 ನೇ ಸ್ಥಾನ ಗಳಿಸಿದ್ದಾರೆ.

ಹರ್ಷಿತಾ ಸೊರಟಿ ಕೃಷಿ ವಿಜ್ಞಾನದಲ್ಲಿ 3537, ಬಿ ಎನ್ ವಾಯ್ ಎಸ್ ನಲ್ಲಿ ಎಂಜಿನಿಯರಿಂಗ್ ನಲ್ಲಿ 4320, ಎಂಜಿನಿಯರಿಂಗ್ ನಲ್ಲಿ 5129,   ಚಿನ್ಮಯ ಹೆಗಡೆ ಇವನು ಎಂಜಿನಿಯರಿಂಗ್ ನಲ್ಲಿ 4868 ನೇ ಸ್ಥಾನ, ಚಿನ್ಮಯಿ ಹೆಗಡೆ  ಎಂಜಿನಿಯರಿಂಗ್ ನಲ್ಲಿ 5480ನೇ ಸ್ಥಾನ, ಧನ್ಯ ಪಾಲನಕರ್ ಇಂಜಿನಿಯರಿಂಗ್ ನಲ್ಲಿ 5485 ನೇ ಸ್ಥಾನ, ರಜತ ಬಿ ಆರ್ ಇಂಜಿನಿಯರಿಂಗ್ ನಲ್ಲಿ 6562 ನೇ ಸ್ಥಾನ, ಸಂಭ್ರಮ ಹೆಗಡೆ ಎಂಜಿನಿಯರಿಂಗ್ ನಲ್ಲಿ 6943 ನೇ ಸ್ಥಾನ, ಚಿರಾಗ್ ಗೌಡ ಇಂಜಿನಿಯರಿಂಗ್ ನಲ್ಲಿ 8299 ನೇ ಸ್ಥಾನ,  ಪ್ರೀತಂ ಆಚಾರಿ ಕೃಷಿ ವಿಜ್ಞಾನದಲ್ಲಿ  ಎಂಜಿನಿಯರಿಂಗ್ ನಲ್ಲಿ 6582, ಬಿ ಎನ್ ವಾಯ್ ಎಸ್ ನಲ್ಲಿ 9461, ಎಂಜಿನಿಯರಿಂಗ್ ನಲ್ಲಿ 10953 ನೇ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ  ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಅಧ್ಯಕ್ಷ ಎಸ್.ಆರ್.ಹೆಗಡೆ, ಚಂದನದ ವಿ.ಜಿ ಜೋಶಿ, ಚಂದನ ಸಂಸ್ಥಾಪಕ ಎಲ್.ಎಂ. ಹೆಗಡೆ ಸಿಇಓ ಸಿ ಡಿ ನಾಯ್ಕ,‌ ಪ್ರಾಂಶುಪಾಲ ಡಾ. ಆರ್.ಎಂ.ಭಟ್, ಉಪ ಪ್ರಾಂಶುಪಾಲೆ ಶೋಭಾ ದೀಕ್ಷಿತ್ , ಸಂಯೋಜಕ ಗುರುವಿಘ್ನೇಶ ಭಟ್ಟ, ಎಲ್ಲ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು, ಪಾಲಕರು  ಹರ್ಷ ವ್ಯಕ್ತಪಡಿಸಿದ್ದಾರೆ.