ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್; 24ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು, ಜುಲೈ 20: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು:

  • ಉತ್ತರ ಕನ್ನಡ
  • ಉಡುಪಿ
  • ದಕ್ಷಿಣ ಕನ್ನಡ

ಆರೆಂಜ್ ಅಲರ್ಟ್:

  • ಶಿವಮೊಗ್ಗ
  • ಕೊಡಗು
  • ಹಾಸನ
  • ಚಿಕ್ಕಮಗಳೂರು

ಯೆಲ್ಲೋ ಅಲರ್ಟ್:

  • ಬೆಳಗಾವಿ
  • ಬೀದರ್
  • ಧಾರವಾಡ
  • ಗದಗ
  • ಹಾವೇರಿ
  • ಕೊಪ್ಪಳ
  • ರಾಯಚೂರು
  • ಯಾದಗಿರಿ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಚಾಮರಾಜನಗರ

ಸಾಧಾರಣ ಮಳೆಯಾಗುವ ನಿರೀಕ್ಷೆ:

  • ವಿಜಯನಗರ
  • ತುಮಕೂರು
  • ದಾವಣಗೆರೆ
  • ಚಿತ್ರದುರ್ಗ
  • ವಿಜಯಪುರ

ಇಂದು ಭಾರಿ ಮಳೆಯಾದ ಪ್ರದೇಶಗಳು:
ಶಿರಾಲಿ, ಮಂಕಿ, ಗೇರುಸೊಪ್ಪ, ಕುರ್ಡಿ, ಚಿಂಚೋಳಿ, ಗದಗ, ಮಂಗಳೂರು, ಹೊನ್ನಾವರ, ಶಕ್ತಿನಗರ, ವಿಜಯಪುರ, ಆಗುಂಬೆ, ಲಿಂಗಸುಗೂರು, ಹುಮ್ನಾಬಾದ್, ಕೆರೂರು, ಮಾಣಿ, ಮಂಠಾಳ, ಸುಳ್ಯ, ಇಳಕಲ್, ಗೋಕರ್ಣ, ಕ್ಯಾಸಲ್‌ರಾಕ್, ಪುತ್ತೂರು, ಬಂಟವಾಳ, ಪಾವಗಡ, ಕಾರ್ಕಳ, ಭಾಗಮಂಡಲ, ಬೆಳ್ಳೂರು, ಅಂಕೋಲಾ, ನಲ್ವತವಾಡ, ಹುಣಸಗಿ, ಹುನಗುಂದ, ಬಾದಾಮಿ, ನರಗುಂದ, ಆಲಮಟ್ಟಿ, ಜೋಯ್ಡಾ, ಅಣ್ಣಿಗೆರೆ, ಕಮಲಾಪುರ, ಸಿಂಧನೂರು, ಕುಷ್ಟಗಿ, ಕಮ್ಮರಡಿ, ಕೊಪ್ಪ, ಕೋಟಾ, ಹುಂಚದಕಟ್ಟೆ, ಪೊನ್ನಂಪೇಟೆ, ಕಳಸ, ಮದ್ದೂರು, ಜಯಪುರ, ಸೋಮವಾರಪೇಟೆ, ಸಿದ್ದಾಪುರ, ಧರ್ಮಸ್ಥಳ, ಬಿಳಗಿ, ಮಾನ್ವಿ, ಮುನಿರಾಬಾದ್, ತಾವರಗೇರಾ, ಸೇಡಂ, ಹಾವೇರಿ.


ಬೆಂಗಳೂರಿನ ಹವಾಮಾನ ವಿವರ:

  • ಎಚ್‌ಎಎಲ್: ಗರಿಷ್ಠ 28.3°C, ಕನಿಷ್ಠ 19.9°C
  • ನಗರ: ಗರಿಷ್ಠ 27.9°C, ಕನಿಷ್ಠ 20.3°C
  • ಕೆಐಎಎಲ್: ಗರಿಷ್ಠ 28.3°C, ಕನಿಷ್ಠ 19.6°C
  • ಜಿಕೆವಿಕೆ: ಗರಿಷ್ಠ 28.2°C, ಕನಿಷ್ಠ 19.6°C

ಇತರೆ ನಗರಗಳ ಉಷ್ಣಾಂಶ ವಿವರಗಳು:

ನಗರಗರಿಷ್ಠ (°C)ಕನಿಷ್ಠ (°C)
ಹೊನ್ನಾವರ26.822.9
ಕಾರವಾರ27.224.0
ಮಂಗಳೂರು25.023.0
ಶಕ್ತಿನಗರ25.322.7
ಬೆಳಗಾವಿ ವಿಮಾನ ನಿಲ್ದಾಣ28.621.2
ಬೀದರ್31.021.8
ವಿಜಯಪುರ29.5
ಧಾರವಾಡ28.020.0
ಗದಗ28.820.0
ಕಲಬುರಗಿ33.422.5
ಹಾವೇರಿ26.420.2
ಕೊಪ್ಪಳ29.123.5
ರಾಯಚೂರು31.822.6