
ಹೊನ್ನಾವರ ಜು. 17: ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಯೋಗಾಸನ ಭಾರತಿಯಿಂದ ಮಾನ್ಯತೆ ಪಡೆದ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಪ್ರಥಮ ಬಾರಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯನ್ನು ನಡೆಸುತ್ತಿದೆ. ಜಿಲ್ಲಾಮಟ್ಟದಿಂದ ಆಯ್ಕೆಯಾದವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತಾರೆ. ಒಲಂಪಿಕ್ ಕ್ರೀಡೆಯಲ್ಲಿ ಯೋಗಾಸನ ಸೇರ್ಪಡೆಯಾಗಿರುವುದರಿಂದ ಈ ಸ್ಪರ್ಧೆ ಮುಂದಿನ ಸ್ಪರ್ಧೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತದೆ ಎಂದು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷ ನಿವೃತ್ತ ಶಿಕ್ಷಕ ಗಣೇಶ ಹೆಬ್ಬಾರ ತಿಳಿಸಿದ್ದಾರೆ..
ದಿ. 27.7.2025 ರಂದು ರವಿವಾರ ಹೊನ್ನಾವರ ಬಸ್‌ಸ್ಟ್ಯಾಂಡ್ ಸಮೀಪದ ಹೆಬ್ಬಾರ ಕಂಪೌಂಡ್‌ನಲ್ಲಿರುವ ಶಿವಗುರು ಸಭಾಭವನ ಪತಂಜಲಿ ಚಿಕಿತ್ಸಾಲಯದ ಮಹಡಿಯಲ್ಲಿ ಸ್ಪರ್ಧೆಗಳು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಸೀನಿಯರ್ ಎಬಿಸಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸಾಂಪ್ರದಾಯಿಕ ಯೋಗಾಸನ, ಕಲಾತ್ಮಕ ಯೋಗಾಸನ, ಲಯಬದ್ದ ಯೋಗಾಸನ 10 ವಿಧದ ಯೋಗಾಸನಗಳಿಗೆ ಅವಕಾಶವಿದೆ.
ಒಬ್ಬ ಕ್ರೀಡಾಪಟು 3 ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕ 300 ರೂ. ಊಟ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶ್ರೀನಾಥ ಜಿ. ಗೌಡ ಜಿಲ್ಲಾ ಸಂಯೋಜನಕರು ಫೋನ್ : 8277341635 ಅಥವಾ ಕಾರ್ಯದರ್ಶಿ ಸ್ಮಿತಾ ಎನ್. ರಾಯಚೂರು ಫೋನ್ : 9611327636 ಖಜಾಂಚಿ ಧರ್ಮರಾಜ ರೇವಣಕರ್ ಫೋನ್ :9448894998 ಸಂಪರ್ಕಿಸಬಹುದು.


