
ಆನಂದಪುರ: ಇಲ್ಲಿನ ಶಾಲೆಯೊಂದರ ವಿದ್ಯಾರ್ಥಿನಿಯೋರ್ವಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ಜು.14ರ ಸೋಮವಾರ ನಡೆದಿದೆ. 10ನೇ ತರಗತಿಯ ಐಶ್ವರ್ಯ ಮೃತಪಟ್ಟ ವಿದ್ಯಾರ್ಥಿನಿ. ಅನಾರೋಗ್ಯದಿಂದ ಸೋಮವಾರ ಸಂಜೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಿಧನಳಾಗಿದ್ದಾಳೆ. ವಿದ್ಯಾರ್ಥಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ಸ್ನೇಹಿತರು ಹಾಗೂ ఎలా ವಿದ್ಯಾರ್ಥಿಗಳು ಶಿಕ್ಷಕ ವೃಂದ ಕಂಬನಿ ಮಿಡಿದಿದೆ.
ಮಂಗಳವಾರ ಬೆಳಿಗ್ಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಸಾಮೂಹಿಕವಾಗಿ ಮೌನಾಚರಣೆ ನಡೆಸಿ, ವಿದ್ಯಾರ್ಥಿನಿಯ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸಂತಾಪ ಸೂಚಿಸಿದರು. ಸ್ನೇಹಿತರು, ಉಪ ಪ್ರಾಂಶುಪಾಲರು, ಶಿಕ್ಷಕ ವೃಂದ ಅಂತಿಮ ದರ್ಶನ ಪಡೆದರು.
