ವಿದೇಶಕ್ಕೆ ಹೊರಟ ಕಾರ್ತಿಕ್ ಮಹೇಶ್; ಇದಕ್ಕೆ ಕಾರಣ ಹೊಸ ಸಿನಿಮಾ

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಸ್ಯಾಂಡಲ್​ವುಡ್​ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅವರಿಗ ಒಂದಾದ ಬಳಿಕ ಒಂದರಂತೆ ಆಫರ್​ಗಳು ಬರುತ್ತಿವೆ. ಆದರೆ, ಅವರ ಗುರಿ ಮಾತ್ರ ಒಳ್ಳೆಯ ಸಿನಿಮಾಗಳನ್ನು ಮಾಡೋದು. ಈಗ ಅವರು ವಿದೇಶಕ್ಕೆ ಹೊರಡಲು ರೆಡಿ ಆಗಿದ್ದಾರೆ. ಹಾಗಂತ ಅವರು ಪ್ರವಾಸಕ್ಕಾಗಿ ಫಾರೆನ್​ಗೆ ತೆರಳುತ್ತಿಲ್ಲ. ಸಿನಿಮಾ ಒಂದರ ಮಾತುಕತೆ ನಡೆಯುತ್ತಿದ್ದು, ಇದರ ಸಂಪೂರ್ಣ ಶೂಟಿಂಗ್ ವಿದೇಶದಲ್ಲಿ ನಡೆಯಲಿದೆ ಅನ್ನೋದು ವಿಶೇಷ.

ಕಾರ್ತಿಕ್ ಮಹೇಶ್​​ ಅವರು ಸದ್ಯ ‘ರಾಮರಸ’ ಹಾಗೂ ‘ರಿಚಿ ರಿಚ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ಇನ್ನೂ ಕೆಲವು ಚಿತ್ರಗಳು ಚರ್ಚೆಯಲ್ಲಿ ಇವೆ. ‘ಗೀತಾ’ ಹಾಗೂ ‘ಹೊಯ್ಸಳ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಎನ್ ಅವರು ಈಗ ‘ಆಲ್ಫಾ’ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಹೊಸ ಪ್ರತಿಭೆಯ ಎಂಟ್ರಿ ಆಗಲಿದೆ. ಈ ಚಿತ್ರದಲ್ಲಿ ಕಾರ್ತಿಕ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಇದಲ್ಲದೆ ಕಾರ್ತಿಕ್ ಮಹೇಶ್ ಅವರು ಹೊಸ ಸಿನಿಮಾ ಒಂದರ ಮಾತುಕತೆ ನಡೆಸುತ್ತಿದ್ದಾರೆ. ಈ ಸಿನಿಮಾದ ಕಥೆ ವಿದೇಶದಲ್ಲಿ ಸಾಗಲಿದೆ. ಇದು ಫೈನಲ್ ಆದರೆ, ಕಾರ್ತಿಕ್ ಅವರು ವಿದೇಶಕ್ಕೆ ಹಾರಲಿದ್ದಾರೆ. ಅಲ್ಲಿ ಕೆಲವು ದಿನಗಳ ಕಾಲ ಶೂಟಿಂಗ್​ನಲ್ಲಿ ಬ್ಯುಸಿ ಆಗಲಿದ್ದಾರೆ. ಎಲ್ಲವೂ ಫೈನಲ್ ಆದ ಬಳಿಕ ಯಾವ ದೇಶ, ಎಷ್ಟು ದಿನ ಶೂಟ್, ಕಥೆ ಬಗ್ಗೆ ಮಾಹಿತಿ ಸಿಗಲಿದೆ. ಕಾರ್ತಿಕ್ ಅವರು ವೆಬ್ ಸೀರಿಸ್ ಮಾಡುವ ಆಲೋಚನೆಯಲ್ಲೂ ಇದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ.

ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಕಾರ್ತಿಕ್ ಮಹೇಶ್ ಅವರು ಚಿತ್ರರಂಗದಲ್ಲಿ ಬ್ಯುಸಿ ಹೀರೋ ಎನಿಸಿಕೊಂಡಿದ್ದಾರೆ. ‘ರಾಮರಸ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ‘ರಿಚಿ ರಿಚ್’ ಚಿತ್ರದ ಶೂಟ್​ ನಡೆಯುತ್ತಿದೆ.  ಒಳ್ಳೆಯ ಕಥೆ ಸಿಕ್ಕರೆ ಅದನ್ನು ಮಾಡಿ ಅಭಿಮಾನಿಗಳ ಎದುರು ಇಡೋ ಹುಮ್ಮಸ್ಸಿನಲ್ಲಿ ಇದ್ದಾರೆ. ಕಾರ್ತಿಕ್ ಮಹೇಶ್ ಅವರಿಗೆ ‘ಮೈಕ್ರೋ ವೆಬ್ ಸೀರಿಸ್’ ತಂಡಗಳಿಂದಲೂ ಆಫರ್ ಬರುತ್ತಿದೆ. ಆದರೆ, ದೊಡ್ಡ ಪರದೆಯ ಪ್ರೇಕ್ಷಕರನ್ನು ರಂಜಿಸಬೇಕು ಎಂಬುದು ಅವರ ಗುರಿ.