ಶಾಸಕ ಭೀಮಣ್ಣ ನಾಯ್ಕರ ಸೇವೆಗೆ ಹಿರಿಯರ ಪ್ರಶಂಸೆ ಹಾಗೂ ಪ್ರೀತಿಯ ಆಶೀರ್ವಾದ

ಶಿರಸಿ: ಹಿರಿಯ ಮಹಿಳೆಯೊಬ್ಬರು ಬಂದು ಶಾಸಕರ ಕಾರ್ಯ ಶ್ಲಾಘಿಸಿ, ಮೈ ದಡವಿ ಹರಸಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಜು.11ರ ಶುಕ್ರವಾರ ನಡೆಯಿತು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ಪ್ರಗತಿಯತ್ತ ಕರ್ನಾಟಕ ಗ್ಯಾರಂಟಿ ಬದುಕು: ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದ್ದರು.

ಈ ವೇಳೆ ಆಗಮಿಸಿದ್ದ ಸವಣಿಯ ಲಲಿತಾ ನಾಯ್ಕ ಅವರು, ಮಗಾ ನನ್ನ ಪರಿಚಯ ಆಯ್ತಾ? ಆರಾಮಾವಾಗಿದ್ದಿಯಾ ಕಂದಾ ಎಂದು ಶಾಸಕ ಭೀಮಣ್ಣ ನಾಯ್ಕ ಅವರ ಹಸ್ತ ಮುಟ್ಟಿ ಪರಿಚಯಿಸಿಕೊಂಡರು. ಒಳ್ಳೆ ಕೆಲ್ಸ ಮಾಡ್ತಿದ್ದೆ ಮಗಾ, ಒಳ್ಳೆಯದಾಗಲಿ ಎಂದು ದಡವಿದರು. ನಂತರ ಆಲಂಗಿಸಿ ಕೆನ್ನೆ ಸವರಿ ಆಶೀರ್ವದಿಸಿದರು

ಸುತ್ತಲಿದ್ದ ಗ್ಯಾರಂಟಿ ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ತಾಲೂಕು ಅಧ್ಯಕ್ಷೆ ಸುಮಾ ಉಗ್ರಾಣಕರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ, ಎಸಿ ಕಾವ್ಯಾರಾಣಿ, ತಹಸೀಲ್ದಾರ ರಮೇಶ ಹೆಗಡೆ, ವಾರ್ತಾಧಿಕಾರಿ ಶಿವಕುಮಾರ, ಕಾಂಗ್ರೆಸ್ ಪ್ರಮುಖ ಎಸ್.ಕೆ.ಭಾಗವತ್ ಇತರರು ಇದ್ದರು.