ಯಲ್ಲಾಪುರ: ತಾಲೂಕಿನ ಉಮ್ಮಚಗಿ ಭಾಗದಲ್ಲಿ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಆಗುತ್ತಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ಮೂರು ತಿಂಗಳುಗಳ ಹಿಂದೆ ಪ್ರತೀ ಗುರುವಾರ ಬೆಳಿಗ್ಗೆ ಹತ್ತೂವರೆಯಿಂದ ಹನ್ನೊಂದು ಗಂಟೆಯ ಒಳಗೆ ಉಮ್ಮಚಗಿ ದೇವಸ್ಥಾನದ ಪಕ್ಕ ಯಲ್ಲಾಪುರದ ಶಮಾ ಭಾರತ್ ಗ್ಯಾಸ್ ಎಜನ್ಸಿಯ ವಾಹನ ಬಂದು ನಿಲ್ಲುತ್ತಿತ್ತು. ಗ್ಯಾಸಿಗಾಗಿ ಬಂದ ಗ್ರಾಹಕರ ಸಮಯ ವ್ಯರ್ಥವಾಗದ ಹಾಗೆ ಗ್ಯಾಸ್ ವಿತರಣೆ ನಡೆಯುತ್ತಿತ್ತು.
ಆದರೆ ಗ್ಯಾಸ್ ಗಾಡಿಗೆ ಬರುತ್ತಿದ್ದ ಸಿಬ್ಬಂದಿಗಳನ್ನು ಏಜೆನ್ಸಿಯವರು ಬದಲಾಯಿಸಿದ ಮೇಲೆ, ಹನ್ನೊಂದು ಗಂಟೆಗೆ ಬರುತ್ತಿದ್ದ ಗ್ಯಾಸ್ ವಾಹನ ಹನ್ನೆರಡುವರೆ ಆದರೂ ಬರುತ್ತಿಲ್ಲ. ಯಾಕೆ ಎಂದು ಎಜೆನ್ಸಿಯವರಿಗೆ ಫೋನ್ ಮಾಡಿ ವಿಚಾರಿಸಲು ಹೋದರೆ ಗ್ರಾಹಕರೊಂದಿಗೆ ಸಹನೆಯಿಂದ ಮಾತಾಡುವುದಿರಲಿ, ಫೋನ್ ಮಾಡಿದವರ ಕಸ್ಟಮರ್ ಐಡಿ ಕೇಳಿ ಹೆದರಿಸುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.