ಯುವತಿಗೆ ಡ್ರಾಪ್ ಕೊಟ್ಟ ಯುವಕನಿಗೆ ಹಲ್ಲೆ: 6 ಮಂದಿ ನೈತಿಕ ಪೊಲೀಸ್ ಬಂಧನ

ಕಲಬುರಗಿ, ಜೂನ್ 28: ಅನ್ಯಕೋಮಿನ ಯುವತಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಯುವಕನಿಗೆ ಹಲ್ಲೆ ಮಾಡಿ ನೈತಿಕ ಪೊಲೀಸ್​ ಗಿರಿ  ಮೆರೆದಿರುವಂತಹ ಘಟನೆ ಜೂನ್​ 26ರ ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಎಂ.ಬಿ.ನಗರ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಮೊಹಮ್ಮದ್​​ ಸಲ್ಮಾನ್​​, ಮೊಹಮ್ಮದ್​ ಆದಿಲ್​, ಮೊಹಮ್ಮದ್ ರೆಹಾನ್, ಮೊಹಮ್ಮದ್ ಉಜೈರ್, ಮೊಹಮ್ಮದ್ ಫೈಜ್, ಮೊಹಮ್ಮದ್ ಆಸಿಫ್ ಬಂಧಿತರು.

ನಡೆದದ್ದೇನು?

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ಬೈಲಪ್ಪ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಅನ್ಯಕೋಮಿನ ಯುವತಿಗೆ ತಮ್ಮ ಬೈಕ್​​ನಲ್ಲಿ ಡ್ರಾಪ್ ನೀಡಿದ್ದಾರೆ. ಈ ವೇಳೆ ಬೈಕ್ ಅಡ್ಡಗಟ್ಟಿ‌ ಕಿಡಗೇಡಿಗಳು ತಮ್ಮ ಸಮುದಾಯದ ಯವತಿಯನ್ನು ಬೈಕ್ ಮೇಲೆ ಡ್ರಾಪ್ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.