ಇನ್‌ಸ್ಟಾಗ್ರಾಮ್​​ನಲ್ಲಿ ಪರಿಚಯವಾಗಿ ಹತ್ತೇ ದಿನಕ್ಕೆ ಕೊಲೆಯಾದ ವಿವಾಹಿತ ಮಹಿಳೆ: ಹತ್ಯೆಗೈದು ಚಿನ್ನಾಭರಣ ದೋಚಿದ ಯುವಕ

ಮಂಡ್ಯ, ಜೂನ್​ 25: ಚಿನ್ನಾಭರಣ ದೋಚಿ ವಿವಾಹಿತ ಪ್ರಿಯತಮೆಯನ್ನು ಕೊಲೈಗೈದ   ಪ್ರೇಮಿ ಶವವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿರುವಂತ ಘಟನೆ ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ. ಹಾಸನ  ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35)ಯನ್ನ ಕರೋಟಿ ಗ್ರಾಮದ ಪುನೀತ್​ ಹತ್ಯೆಗೈದಿದ್ದಾನೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಪುನೀತ್ ಹಾಗೂ ವಿವಾಹಿತ ಮಹಿಳೆ ಪ್ರೀತಿ ಇಬ್ಬರು ಇನ್‌ಸ್ಟಾಗ್ರಾಮ್​​ನಲ್ಲಿ ಇತ್ತೀಚೆಗೆ ಪರಿಚಯವಾಗಿದ್ದಾರೆ. ಗಂಡ, ಮಕ್ಕಳಿದ್ದರೂ ಪ್ರೀತಿ, ಪುನೀತ್​ನನ್ನ ಲವ್​ ಮಾಡಿದ್ದಾರೆ. ಪರಿಚಯವಾಗಿ ಹತ್ತು ದಿನ ಪ್ರೀತಿ, ಪ್ರೇಮ ಎಂದು ಸುತ್ತಾಡಿದ್ದಾರೆ.ಅದೇ ರೀತಿಯಾಗಿ ಕಳೆದ ಭಾನುವಾರ ಒಟ್ಟಿಗೆ ಕಾರಿನಲ್ಲಿ ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳನ್ನು ಸುತ್ತಾಡಿ ಫುಲ್​ ಎಂಜಾಯ್‌ ಮಾಡಿದ್ದಾರೆ. ಪ್ರಿಯತಮೆ ಫೋನ್​​ಗೆ ಬಂದ ಕಾಲ್​ನಿಂದಲೇ ಐನಾತಿ ಸಿಕ್ಕಿಬಿದಿದ್ದಾನೆ. ಬಳಿಕ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ಆಗಿದೆ. ಅಲ್ಲೇ ಪ್ರೀತಿಯನ್ನ ಕೊಲೆ ಮಾಡಿದ ಪುನೀತ್​, ಮೈಮೆಲಿದ್ದ ಚಿನ್ನಾಭರಣ ದೋಚಿದ್ದಾನೆ. ಬಳಿಕ ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಶವ ಬಿಚ್ಚಿಟ್ಟಿದ್ದಾನೆ.