
ಪ್ರಕರಣದಲ್ಲಿ ಎ-1 ಆಗಿರುವ ಅನಂತ್ ಕುಮಾರ್ ಹೆಗಡೆ. ಎ-2 ಅನಂತ್ ಕುಮಾರ್ ಹೆಗಡೆ ಗನ್ ಮ್ಯಾನ್. ಎ-3- ಅನಂತ್ ಕುಮಾರ್ ಹೆಗಡೆ ಕಾರಿನ ಡ್ರೈವರ್ ಹೆಸರನ್ನ ಉಲ್ಲೇಖಿಸಲಾಗಿದೆ. ಖುದ್ದು ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅನಂತ್ ಕುಮಾರ್ ಹೆಗಡೆಯ ಗನ್ ಮ್ಯಾನ್ ಗನ್ ತೋರಿಸಿ ಬೆದರಿಸಿದ್ದಾರೆ. ನಿಮ್ಮನ್ನ ಶೂಟ್ ಮಾಡ್ತೀನಿ ಅಂದಿರೋದು ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ. ಸೆಕ್ಷನ್ 117 (2), 126 (2), 74, 351 , 352 ಬಿಎನ್ಎಸ್ ಅಡಿ ದೂರು ದಾಖಲಿಸಿದ್ದೀವಿ ಅಂತ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬ ಮಾಹಿತಿ ನೀಡಿದ್ದಾರೆ.

ಮಾಜಿ ಸಂಸದ ಅನಂತಕುಮಾರ್ ಹೆಗಡೆ ಕಾರನ್ನು ಓವರ್ ಟೇಕ್ ಮಾಡಿದರು ಎಂಬ ಕಾರಣಕ್ಕೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಗನ್ ಮ್ಯಾನ್, ಡ್ರೈವರ್ ಹಾಗೂ ಮಾಜಿ ಸಂಸದರ ಮಗ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀದ್ ಖಾನ್ ಎಂಬುವರೇ ಹಲ್ಲೆಗೊಳಗಾದವರಾಗಿದ್ದು ಗಾಯಾಳು ಇಲಿಯಾಜ್ ಖಾನ್ ಮಗ ನವೀದ್ ಖಾನ್ ಮಾಧ್ಯಮಗಗಳಿಗೆ ಹೇಳಿಕೆ ನೀಡಿದ್ದು ನಿಜಗಲ್ ಬಳಿಯ ಭಾರತ್ ಪೆಟ್ರೋಲ್ ಬಂಕ್ ಬಳಿ ಘಟನೆ ಆಗಿದೆ.
ನಮ್ಮ ಕಸಿನ್ ಇನ್ನೋವಾ ಕಾರ್ ಓಡಿಸ್ತಾ ಇದ್ರು,ಕಾರ್ ಓವರ್ ಟೆಕ್ ಮಾಡಿದ್ರು,ಅಷ್ಟಕ್ಕೆ ಕಾರ್ ಸೈಡಿಗೆ ಹಾಕು ಅಂದರು,ಬಂದು ಏಕಾಏಕಿಯಾಗಿ ಗನ್ ಮ್ಯಾನ್ ಹಾಗೂ ಡ್ರೈವರ್ ಹಲ್ಲೆ ನಡೆಸಿದ್ರು ಎಂದು ಹೇಳುದ್ದು ಕಾರಿನಲ್ಲಿ ಇದ್ದ ನವೀದ್ ಖಾನ್ ತಾಯಿ ಸಹ ಸಾಬರು ಎಂದು ಹೊಡೆಯಿರಿ ಎಂದು ಹಲ್ಲೆ ಮಾಡಿದರು, ಅವರ ಮಗನೂ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಘಟನೆ ಸಂಬಂಧ ದಾಬಾಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಾಬಾಸ್ ಪೇಟೆ ಠಾಣೆ ಎದುರು ಮುಸ್ಲಿಂ ಸಮುದಾಯದ ಜನ ಜಮಾಯಿಸಿ ಘಟನೆ ಖಂಡಿಸಿ ಪ್ರತಿಭಟಿಸುತಿದ್ದಾರೆ. ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಎ ಎಸ್ಪಿ ಪ್ರಸನ್ನ ಕುಮಾರ್ ಠಾಣೆಗೆ ಹಾಜರಾಗಿ ತನಿಖೆ ಕೈಗೊಂಡಿದ್ದಾರೆ.
