
ಇಸ್ರೇಲ್ ಮತ್ತು ಇರಾನ್ ನಡುವೆ ಭಾರೀ ಬಿಕ್ಕಟ್ಟು ಉಂಟಾಗಿದೆ. ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇರಾನ್ ಕೂಡ ಪ್ರತಿದಾಳಿಯನ್ನು ನಡೆಸಿದೆ. ಇದರ ನಡುವೆ ಇರಾನ್ ಹಾಗೂ ಇಸ್ರೇಲ್ನಲ್ಲಿರುವ ಭಾರತದ ಪ್ರಜೆಗಳನ್ನು ಆಪರೇಷನ್ ಸಿಂಧು ಮೂಲಕ ಭಾರತಕ್ಕೆ ಕರೆಸಿಕೊಳ್ಳುತ್ತಿದೆ. ಆದರೆ ಇದರ ಜತೆಗೆ ಭಾರತದ ಅಕ್ಕ-ಪಕ್ಕ ರಾಷ್ಟ್ರದ ಪ್ರಜೆಗಳನ್ನು ಕೂಡ ಭಾರತದ ಕಾಪಾಡಿದೆ. ಇಂದು ಕೂಡ (ಜೂ.21) ಇಸ್ರೇಲ್ ಇರಾನ್ ಯುದ್ಧ ಮುಂದುವರಿದಿದೆ. ಈ ಯುದ್ಧದ ನಡುವೆ ಸಿಲುಕಿಕೊಂಡಿರುವ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳನ್ನು ಕೂಡ ಭಾರತ ರಾಯಭಾರ ಕಚೇರಿ ಕಾಪಾಡಿದೆ. ನೇಪಾಳ ಹಾಗೂ ಶ್ರೀಲಂಕಾ ಸರ್ಕಾರದ ಕೋರಿಕೆ ಮೇರೆಗೆ ಭಾರತದ ಇರಾನ್ನಲ್ಲಿರುವ ಅವರ ಪ್ರಜೆಗಳನ್ನು ಕಾಪಾಡಿದೆ.
ಈ ಸ್ಥಳಾಂತರ ಕಾರ್ಯದಲ್ಲಿ ನೇಪಾಳ ಹಾಗೂ ಶ್ರೀಲಂಕಾದ ಪ್ರಜೆಗಳು ಕೂಡ ಭಾಗಿಯಾಗಲಿದ್ದಾರೆ ಎಂದು ಇರಾನ್ನಲ್ಲಿರುವ ಭಾರತದ ರಾಯಭಾರಿ ಕಚೇರಿ ಹೇಳಿದೆ. ನೇಪಾಳ ಮತ್ತು ಶ್ರೀಲಂಕಾ ನಾಗರಿಕರಿಗೆ ರಾಯಭಾರ ಕಚೇರಿ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಒದಗಿಸಿದೆ. ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿ ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅಡಿಯಲ್ಲಿ ಟೆಹ್ರಾನ್ ಮೇಲೆ ದಾಳಿಯನ್ನು ನಡೆಸಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಏಷ್ಯಾದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ನಿರ್ಣಾಯಕ ಕಾರ್ಯಾಚರಣೆಯಾದ ಆಪರೇಷನ್ ಸಿಂಧುವನ್ನು ಭಾರತ ಪ್ರಾರಂಭಿಸಿತ್ತು.
517 ಭಾರತೀಯರ ಸ್ಥಳಾಂತರ:
ಶುಕ್ರವಾರ, ಇರಾನ್‌ನ ಮಶಾದ್‌ನಿಂದ 290 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳನ್ನು ಇದ್ದರು. ಈ ವಿದ್ಯಾರ್ಥಿಗಳನ್ನು ಹೊತ್ತ ವಿಶೇಷ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ಇನ್ನು ಇಸ್ರೇಲ್ ದಾಳಿಯಿಂದ ಇರಾನ್ನಲ್ಲಿ ಕೆಟ್ಟ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ಭದ್ರತಾ ವ್ಯವಸ್ಥೆಗಳು ತುಂಬಾ ಕೆಟ್ಟಾಗಿದ್ದು. ಈ ಕಾರಣದಿಂದ ಅಲ್ಲಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಈ ಕಾರ್ಯಚರಣೆ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಬಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಸರ್ಕಾರಕ್ಕೆ ಧನ್ಯವಾದ ಹೇಳಿದೆ. ಸಂಘರ್ಷದ ಮಧ್ಯೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಭಾರತೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಇರಾನ್ ಕೆಲಸ ಮಾಡುತ್ತಿದೆ.
ತುರ್ಕಮೆನಿಸ್ತಾನದ ಅಶ್ಗಬಾತ್ ನಿಂದ ಮತ್ತೊಂದು ವಿಮಾನ ಶನಿವಾರ ಬೆಳಗಿನ ಜಾವ 3 ಗಂಟೆಗೆ ನವದೆಹಲಿಗೆ ಬಂದಿಳಿದಿದೆ. ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇದುವರೆಗೆ 517 ಭಾರತೀಯ ಪ್ರಜೆಗಳು ಆಪರೇಷನ್ ಸಿಂಧು ಅಡಿಯಲ್ಲಿ ಇರಾನ್ ನಿಂದ ಭಾರತಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.
ಜೂನ್ 19ರಿಂದ ಈ ಕಾರ್ಯಚರಣೆ ನಡೆದಿದೆ. ಮೊದಲು ವಿಮಾನದಲ್ಲಿ ಉರ್ಮಿಯಾ ವಿಶ್ವವಿದ್ಯಾಲಯದ 110 ಭಾರತೀಯ ವಿದ್ಯಾರ್ಥಿಗಳು ದೆಹಲಿಯಲ್ಲಿ ಇಳಿದಿದ್ದಾರೆ. ಈ ವಿದ್ಯಾರ್ಥಿಗಳನ್ನು ಭೂ ಮಾರ್ಗದ ಮೂಲಕ ಅರ್ಮೇನಿಯಾಗೆ ಸ್ಥಳಾಂತರಿಸಲಾಯಿತು, ನಂತರ ಯೆರೆವಾನ್‌ನಿಂದ ನವದೆಹಲಿಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮುಂದುವರೆದಿರುವುದರಿಂದ , ಸೋಮವಾರ ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಜಾಗರೂಕರಾಗಿರಿ, ಅನಗತ್ಯ ಚಲನೆಯನ್ನು ತಪ್ಪಿಸಿ, ರಾಯಭಾರ ಕಚೇರಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅನುಸರಿಸಿ ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯಂತೆ ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ಕೇಳಿಕೊಂಡಿದೆ.



