ಯುದ್ಧಪೀಡಿತ ಇರಾನ್‌ನಿಂದ ಮತ್ತೆ 290 ಭಾರತೀಯರು ವಾಪಸ್‌, 19 ಕನ್ನಡಿಗರು ತವರಿಗೆ

ನವದೆಹಲಿ: ಯುದ್ಧಪೀಡಿತ ಇರಾನ್‌ನಲ್ಲಿ ಸಿಲುಕಿಕೊಂಡ ಭಾರತೀಯರನ್ನು ಕರೆತರುತ್ತಿರುವ ಎರಡನೇ ವಿಮಾನ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. 290 ಭಾರತೀಯರನ್ನು ಹೊತ್ತ ವಿಶೇಷ ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದು, ಅದರಲ್ಲಿ 19 ಮಂದಿ ಕನ್ನಡಿಗರೂ ತವರಿಗೆ ವಾಪಸಾಗಿದ್ದಾರೆ ಆಪರೇಶನ್‌ ಸಿಂಧು ಹೆಸರಿನಲ್ಲಿ ಇವರನ್ನು ಮರಳಿ ತರುವ ಕಾರ್ಯಾಚರಣೆ ನಡೆಯುತ್ತಿದೆ.

ಇರಾನ್‌ನಿಂದ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಕಾರ್ಯಾಚರಣೆಯಾದ ಆಪರೇಷನ್ ಸಿಂಧು ಅನ್ನು ಭಾರತ ಪ್ರಾರಂಭಿಸಿದ್ದು, ಭಾರತೀಯ ಪ್ರಜೆಗಳನ್ನು ಹೊತ್ತ ಮತ್ತೊಂದು ವಿಮಾನ ದೆಹಲಿ ತಲುಪಿದೆ. ಸುರಕ್ಷಿತವಾಗಿ ದೆಹಲಿ ತಲುಪಿದ ಭಾರತೀಯ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.

ಯುದ್ಧಪೀಡಿತ ಇರಾನ್‌ನಿಂದ 290 ಭಾರತೀಯರು ವಾಪಸ್ ಆಗಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ 290 ವಿದ್ಯಾರ್ಥಿಗಳು ಬಂದಿಳಿದಿದ್ದು, ಅವರು ಬರುತ್ತಿದ್ದಂತೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಮೊಳಗಿಸಲಾಗಿದೆ. ಆಪರೇಷನ್ ಸಿಂಧು ಹೆಸರಿನಲ್ಲಿ ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, 290 ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ಇರಾನ್‌ನಿಂದ ದೆಹಲಿಗೆ 16 ಮಂದಿ ಕನ್ನಡಿಗರು ಕೂಡ ಆಗಮಿಸಿದ್ದಾರೆ. ಇವರು ದೆಹಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಬೆಳಗ್ಗೆ 7:30ರ ವಿಮಾನದಲ್ಲಿ ದೆಹಲಿಯಿಂದ ಎಂಟು ಮಂದಿ ಪ್ರಯಾಣ ಬೆಳೆಸಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸೇರಿ ಒಟ್ಟು 290 ಜನ ಪಾಪಸಾಗಿದ್ದಾರೆ. ಜಮ್ಮು ಕಾಶ್ಮೀರದ 190, ಉತ್ತರ ಪ್ರದೇಶದ 42, ಕರ್ನಾಟಕದ 16, ದೆಹಲಿಯ 12, ಮಹಾರಾಷ್ಟ್ರದ 8, ಹರಿಯಾಣದ 7, ಬಿಹಾರ, ಪಶ್ಚಿಮ ಬಂಗಾಳದ ಇಬ್ಬರು, ಮಧ್ಯಪ್ರದೇಶದ ಇಬ್ಬರು, ಜಾರ್ಖಂಡ್ ನ ಓರ್ವ ಹಾಗೂ ವಿವಿಧ ರಾಜ್ಯದ 10 ಮಂದಿ ವಾಪಸ್ ಆಗಿದ್ದಾರೆ.