ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ

ಕಾರವಾರ, ಜೂನ್ 12: ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಾರವಾರದಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಪಟ್ಟಣದ ಕೆಎಸ್ಆರ್​ಟಿಸಿ ಡಿಪೋ ಸಂಪೂರ್ಣ ಜಲಾವೃತಗೊಂಡಿದೆ. ಡಿಪೋದಿಂದ ಬಸ್ ಹೊರ ತೆಗೆಯಲು ಚಾಲಕರು ಪರದಾಟಪಡುವಂತಾಗಿದೆ. ಒದ್ದೆಯಾದ ವಸ್ತುಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಹರಸಾಹಸಪಡುವಂತಾಗಿದೆ.