ಮಂಗಳೂರು: ನೀರಿನ ಟ್ಯಾಂಕ್​​ ನಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ

ಮಂಗಳೂರು, (ಜೂನ್ 05): ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ರಮೇಶ್ ರೈ   ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದಕ್ಷಿಣ ಕನ್ನಡ   ಜಿಲ್ಲೆ ಪುತ್ತೂರು ನಗರಸಭೆ ಬಿಜೆಪಿ ಸದಸ್ಯರಾಗಿದ್ದ ರಮೇಶ್ ರೈ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಪಾಣಿ ಮಂಗಳೂರು ಸೇತುವೆಯ ಬಳಿ ರಮೇಶ್ ರೈ ಮೊಬೈಲ್ ಮತ್ತು ಬೈಕ್ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ  ಇಂದು (ಜೂನ್ 05) ಣೆ ಮಂಗಳೂರಿನ ಸೇತುವೆ ಬಳಿಯ ನೀರಿನ ಟ್ಯಾಂಕಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ.