ಈ ಸಲ ಕಪ್‌ ನಮ್ಮದೇ.. ಆರ್‌ಸಿಬಿ ತಂಡಕ್ಕೆ ಡಿ.ಕೆ ಶಿವಕುಮಾರ್ ಭರ್ಜರಿ ಸ್ವಾಗತ

  • ಹಾಲ್‌ ಏರ್‌ಪೋರ್ಟ್‌ಗೆ ತೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್
  • ಬೆಂಗಳೂರಿಗೆ ಬಂದ ಆರ್‌ಸಿಬಿ ಆಟಗಾರರಿಗೆ ಅಭಿಮಾನಿಗಳ ಜೈಕಾರ
  • ಆರ್‌ಸಿಬಿ ವಿಜಯೋತ್ಸವಕ್ಕೆ ವಿಧಾನಸೌಧದ ಸುತ್ತಾ ಜನವೋ ಜನ

ಐಪಿಯಲ್‌ ಸೀಸನ್ ಚಾಪಂಪಿಯನ್‌ 18ರ ಆರ್‌ಸಿಬಿ ತಂಡ ಕಪ್ ಗೆದ್ದು ಬೆಂಗಳೂರಿಗೆ ಮರಳಿದೆ. ತವರಿಗೆ ಬಂದ ಆಟಗಾರರನ್ನ ಫ್ಯಾನ್ಸ್‌ ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ಅಭಿಮಾನಿಗಳ ಸಾಗರ ನೋಡಿ ಪ್ರತಿಯೊಬ್ಬರು ಫುಲ್ ಫಿದಾ ಆಗಿದ್ದಾರೆ.

ಹಾಲ್‌ ಏರ್‌ಪೋರ್ಟ್‌ಗೆ ತೆರಳಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್‌ಸಿಬಿ ಆಟಗಾರರಿಗೆ ಕರ್ನಾಟಕದ ಬಾವುಟ ಹಾಗೂ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಹಾಲ್‌ ಏರ್‌ಪೋರ್ಟ್‌ನ ಹೊರಗೂ ಅಭಿಮಾನಿಗಳ ದಂಡು ಆರ್‌ಸಿಬಿ ಆಟಗಾರರಿಗೆ ಜೈಕಾರ ಹಾಕಿದರು.

ವಿಮಾನ ನಿಲ್ದಾಣದಿಂದ ಹೊರಡುವಾಗ ಡಿ.ಕೆ ಶಿವಕುಮಾರ್ ಅವರು ಕಾರಿನಲ್ಲಿ ಆರ್‌ಸಿಬಿ ಫ್ಲಾಗ್ ಹಿಡಿದು ಸಂತಸ ವ್ಯಕ್ತಪಡಿಸಿದರು.

ವಿಧಾನಸೌಧದ ಮೆಟ್ಟಿಲ ಮೇಲೆ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡಲಾಗುತ್ತಿದೆ. ವಿಧಾನಸೌಧದ ರಸ್ತೆಯಲ್ಲಿ ಜನಸಾಗರವೇ ಜಮಾಯಿಸಿದೆ.