ಕಡತೋಕಾದಲ್ಲಿ ನೂತನ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿದ ಸೋಂದಾ ಶ್ರೀಗಳು

ಹೊನ್ನಾವರ : ಹೊನ್ನಾವರ ತಾಲೂಕಿನ ಕಡತೋಕಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಠದ ನಿರ್ಮಾಣದ ಶೀಲಾನ್ಯಾಸವನ್ನು ಶಿರಸಿಯ ಶ್ರೀ ಸ್ವರ್ಣಲ್ಲಿ ಮಠದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನೆರವೇರಿಸಿದ್ರು…

ವಿನಾಯಕ ಭಟ್ ಮಕ್ಕಿಗದ್ದೆ ಕಡತೋಕ ದಂಪತಿಗಳು ಪೂಜಾ ಕೈಂಕರ್ಯ ನೆರವೇರಿಸಿದ್ರು. ವಿದ್ಯಾ ನಾಗಭೂಷಣ್ ಭಟ್, ಕಡತೋಕ ಶಿವಾನಂದ ಹೆಗಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾವಿತ್ರಿ ಭಟ್, ಉಪಸ್ಥಿತರಿದ್ದರು. ರಾಮಕ್ಷತ್ರಿಯ ಸಮಾಜದ ಸ್ವರ್ಣವಲ್ಲಿ ಪರಿಷತ್ ನ ಅಧ್ಯಕ್ಷರಾದ ಎಸ್. ಕೆ. ನಾಯ್ಕ, ಕಾರ್ಯದರ್ಶಿ ರಾಜೇಶ್ ವಿನಾಯಕ ಸಾಲೆಹಿತ್ತಲ, ಎಸ್ ಜಿ. ನಾಯ್ಕ. ಕುಮಟಾ. ಎಮ್. ಡಿ. ನಾಯ್ಕ. ಹೊನ್ನಾವರ. ಆನಂದ್ ವೈ. ನಾಯ್ಕ ಚಂದಾವರ. ಎಮ್. ಆರ್. ನಾಯ್ಕ. ಸೀತಾರಾಮ್ ಜಿ. ನಾಯ್ಕ. ದಾಮೋದರ್ ನಾಯ್ಕ. ಉಲ್ಲಾಸ ನಾಯ್ಕ. ಮಿರ್ಜಾನ.ಹಾಗೂ ಇತರರು ಹಾಜರಿದ್ದರು