ಫೈನಲ್​ನಲ್ಲಿ ಆರ್‌ಸಿಬಿ ಗೆಲುವು ಖಚಿತ: ತಂಡದಲ್ಲಿದ್ದಾನೆ ಅತ್ಯಂತ ಅದೃಷ್ಟಶಾಲಿ ಆಟಗಾರ

ಬೆಂಗಳೂರು (ಮೇ. 31): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವರ್ಷಗಳ ನಂತರ ಐಪಿಎಲ್ ಫೈನಲ್ ತಲುಪಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆರ್‌ಸಿಬಿ, ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಪಂಜಾಬ್ ತಂಡವು ತನ್ನ ತವರು ನೆಲದಲ್ಲಿ ಆರ್‌ಸಿಬಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಸದ್ಯ ಬೆಂಗಳೂರು ಫಿನಾಲೆಗೆ ತಲುಪಿದ್ದರೂ ಈವರೆಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. 2016 ರಕ್ಕೂ ಮೊದಲು, ತಂಡವು 2011 ಮತ್ತು 2009 ರಲ್ಲಿ ಫೈನಲ್ ತಲುಪಿತ್ತು ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ ವಿಶೇಷ ಎಂದರೆ ತಂಡವು ಫೈನಲ್‌ನಲ್ಲಿ ಎಂದಿಗೂ ಸೋತಿಲ್ಲದ ಆಟಗಾರನನ್ನು ಹೊಂದಿದೆ.

ಫೈನಲ್‌ನಲ್ಲಿ ಜೋಶ್ ಹ್ಯಾಜಲ್‌ವುಡ್‌ಗೆ ಅಜೇಯ ಗೆಲುವು:

ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಹ್ಯಾಜಲ್‌ವುಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಯಾವುದೇ ಫೈನಲ್ ಪಂದ್ಯವನ್ನು ಸೋತಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 6 ಫೈನಲ್ ಪಂದ್ಯಗಳನ್ನು ಆಡಿದ್ದಾರೆ. ಅವರು ಇದ್ದ ತಂಡ ಇವೆಲ್ಲವುಗಳಲ್ಲಿ ಗೆದ್ದಿದೆ. 2021 ರಲ್ಲಿ, ಹ್ಯಾಜಲ್‌ವುಡ್ ಸಿಡ್ನಿ ಸಿಕ್ಸರ್ಸ್‌ ಪರ ಚಾಂಪಿಯನ್ಸ್ ಲೀಗ್ ಟಿ20೦ ಫೈನಲ್‌ನಲ್ಲಿ ಆಡಿದ್ದರು. ಅವರ ತಂಡ ಗೆದ್ದಿತ್ತು. 2015 ರ ವಿಶ್ವಕಪ್ ಫೈನಲ್‌ನಲ್ಲಿ ಅವರು ತಂಡದ ಭಾಗವಾಗಿದ್ದರು. 2020 ರ ಬಿಗ್ ಬ್ಯಾಷ್ ಲೀಗ್, 2021 ರ ಐಪಿಎಲ್ ಮತ್ತು 2021 ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಜೋಶ್ ಹ್ಯಾಜಲ್‌ವುಡ್ ಕೂಡ ಇದ್ದರು. ಇದಲ್ಲದೆ, ಆಸ್ಟ್ರೇಲಿಯಾ 2023 ರ ವಿಶ್ವಕಪ್ ಗೆದ್ದಿತು. ಆ ಪಂದ್ಯದಲ್ಲಿ ಕೂಡ ಹ್ಯಾಜಲ್‌ವುಡ್ ಆಡಿದ್ದರು.

ಜೋಶ್ ಹ್ಯಾಜಲ್‌ವುಡ್ ಭಾಗವಹಿಸಿದ ಫೈನಲ್ಸ್:

  • 2012 CLT20 (ಸಿಡ್ನಿ ಸಿಕ್ಸರ್ಸ್‌ಗಾಗಿ ಗೆಲುವು)
  • 2015 WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)
  • 2020 BBL (ಸಿಡ್ನಿ ಸಿಕ್ಸರ್ಸ್‌ಗಾಗಿ ಗೆಲುವು)
  • 2021 IPL (CSKಗಾಗಿ ಗೆಲುವು)
  • 2021 T20WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)
  • 2023 WC (ಆಸ್ಟ್ರೇಲಿಯಾಕ್ಕಾಗಿ ಗೆಲುವು)

ಅತ್ಯುತ್ತಮ ಫಾರ್ಮ್‌ನಲ್ಲ ಹ್ಯಾಜಲ್‌ವುಡ್:

ಐಪಿಎಲ್ 2025 ರಲ್ಲಿ ಜೋಶ್ ಹ್ಯಾಜಲ್‌ವುಡ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಕ್ವಾಲಿಫೈಯರ್-1 ರಲ್ಲಿಯೂ ಅದ್ಭುತ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿಯೇ ಪಂಜಾಬ್‌ನ ಇಬ್ಬರು ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೋಶ್ ಇಂಗ್ಲಿಸ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಇದಾದ ನಂತರ, ಪಿಬಿಕೆಸ್​ನ ಪ್ರಮುಖ ಆಲ್‌ರೌಂಡರ್ ಅಜ್ಮತುಲ್ಲಾ ಉಮರ್ಜೈ ಅವರ ವಿಕೆಟ್ ಅನ್ನು ಸಹ ಪಡೆದರು. ಒಟ್ಟು 3.1 ಓವರ್‌ಗಳಲ್ಲಿ 21 ರನ್‌ಗಳನ್ನು ನೀಡಿ 3 ವಿಕೆಟ್ ಕಿತ್ತರು.

ಈ ಋತುವಿನಲ್ಲಿ ಹ್ಯಾಜಲ್‌ವುಡ್ 11 ಪಂದ್ಯಗಳಲ್ಲಿ 21 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಅವರು ಪರ್ಪಲ್ ಕ್ಯಾಪ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 10 ಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಹ್ಯಾಜಲ್‌ವುಡ್ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸರಾಸರಿಯಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ ಅವರಿಗಿಂತ ಮುಂದಿದ್ದಾರೆ.