ಧರ್ಮಶಾಲಾದಲ್ಲಿ ಪಂದ್ಯ ರದ್ದಾದ ನಂತರ ಏನಾಯಿತು: ರಹಸ್ಯ ಬಿಚ್ಚಿಟ್ಟ ಚಿಯರ್‌ಲೀಡರ್‌

ಐಪಿಎಲ್ 2025 ರ ಪಂಜಾಬ್- ಡೆಲ್ಲಿ ಪಂದ್ಯವನ್ನು ಧರ್ಮಶಾಲಾದಲ್ಲಿ ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು. ಅದರ ನಂತರ ಮೈದಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚಿಯರ್‌ಲೀಡರ್ ಈ ಘಟನೆಯ ಬಗ್ಗೆ ಹೇಳಿಕೊಂಡಿದ್ದು, ಇದು ತುಂಬಾ ಭಯಾನಕವಾಗಿದೆ.

ಬೆಂಗಳೂರು (ಮೇ. 09): ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 58 ನೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯ ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯುತ್ತಿತ್ತು. ಧರ್ಮಶಾಲಾದ ನೆರೆಯ ನಗರಗಳಾದ ಜಮ್ಮು – ಕಾಶ್ಮೀರ ಮತ್ತು ಪಂಜಾಬ್‌ಗಳಲ್ಲಿ ವಾಯುದಾಳಿ ಎಚ್ಚರಿಕೆ ನೀಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಇದರ ಹಿಂದಿನ ಕಾರಣ ಫ್ಲಡ್ ಲೈಟ್‌ಗಳಲ್ಲಿನ ದೋಷ ಎಂದು ಹೇಳಲಾಗಿತ್ತು. ಬಳಿಕ ಇದು ವಾಯುದಾಳಿಯ ಎಚ್ಚರಿಕೆ ಎಂದು ತಿಳಿದನಂತರ ಧರ್ಮಶಾಲಾದ 23,000 ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಹಾಜರಿದ್ದ ತಂಡ ಮತ್ತು ಅಭಿಮಾನಿಗಳನ್ನು ಬಿಗಿ ಭದ್ರತೆಯಲ್ಲಿ ಹೊರಗೆ ಕರೆದೊಯ್ಯಲಾಯಿತು. ಇದಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ, ಇದರಲ್ಲಿ ಒರ್ವ ಚಿಯರ್‌ಲೀಡರ್ ಆಘಾತಕ್ಕೆ ಒಳಗಾಗಿರುವುದನ್ನು ಕಾಣಬಹುದು.

ಧರ್ಮಶಾಲಾದ ಭಯಾನಕ ದೃಶ್ಯದ ಬಗ್ಗೆ ಚಿಯರ್‌ಲೀಡರ್ ಹೇಳಿದ್ದೇನು?:

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 10.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಇದಾದ ನಂತರ ಕ್ರೀಡಾಂಗಣದ ಒಂದು ಲೈಟ್ ಆಫ್ ಆಯಿತು. ನಂತರ ಇತರ ದೀಪಗಳನ್ನು ಸಹ ಆಫ್ ಮಾಡಿ ಆಟಗಾರರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕಳುಹಿಸಲಾಯಿತು. ನಂತರ ಸ್ವಲ್ಪ ಸಮಯದಲ್ಲೇ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಲಾಯಿತು. ಅದರ ನಂತರ ಮೈದಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚಿಯರ್‌ಲೀಡರ್ ಈ ಘಟನೆಯ ಬಗ್ಗೆ ಹೇಳಿಕೊಂಡಿದ್ದು, ಇದು ತುಂಬಾ ಭಯಾನಕವಾಗಿದೆ.

“ಆಟದ ಮಧ್ಯದಲ್ಲಿ ಇಡೀ ಕ್ರೀಡಾಂಗಣವನ್ನು ಖಾಲಿ ಮಾಡಲಾಯಿತು, ಮತ್ತು ಅದು ತುಂಬಾ ಭಯಾನಕವಾಗಿತ್ತು” ಎಂದು ಚಿಯರ್‌ಲೀಡರ್ ಹೇಳಿದರು. ಎಲ್ಲರೂ ಬಾಂಬ್‌ಗಳು ಬರುತ್ತಿವೆ ಎಂದು ಕೂಗುತ್ತಿದ್ದರು. ಇದು ನನ್ನನ್ನು ಇನ್ನಷ್ಟು ಹೆದರುವಂತೆ ಮಾಡಿತು. ನಾವು ನಿಜವಾಗಿಯೂ ಧರ್ಮಶಾಲಾದಿಂದ ಹೊರಬರಲು ಬಯಸಿದ್ದೆವು. ಇದು ತುಂಬಾ ಭಯಾನಕ. ನಾನು ಯಾಕೆ ಅಳುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಏನಾಗುತ್ತಿದೆ ಎಂಬುದರ ಬಗ್ಗೆ ನಾನು ಇನ್ನೂ ಆಘಾತದಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ. ಚಿಯರ್‌ಲೀಡರ್‌ನ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಆಟಗಾರರನ್ನು ಎಷ್ಟು ಅವಸರದಲ್ಲಿ ಸ್ಥಳಾಂತರಿಸಲಾಯಿತೆಂದರೆ, ಅನೇಕರು ಪ್ಯಾಡ್‌ಗಳನ್ನು ಧರಿಸಿ ಹೋಟೆಲ್‌ಗೆ ತಲುಪಿದರು. ಹತ್ತಿರದ ಪಠಾಣ್‌ಕೋಟ್‌ನಲ್ಲಿ ನಡೆದ ದಾಳಿಯ ಬಗ್ಗೆ ತಮಗೆ ತಿಳಿಸಲಾಗಿತ್ತು ಎಂದು ಒರ್ವ ಆಟಗಾರ ಹೇಳಿದ್ದಾರೆ. ಅವರನ್ನು ತಕ್ಷಣ ಹೋಟೆಲ್‌ಗೆ ಹಿಂತಿರುಗಲು ಕೇಳಲಾಯಿತು. ಪಂಜಾಬ್ ತಂಡದ ಬಸ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಕುಳಿತಿದ್ದರು. ಆ ಜಾಗ ತುಂಬಾ ಜನದಟ್ಟಣೆಯಿಂದ ಕೂಡಿತ್ತು. ವಿದೇಶಿ ಆಟಗಾರರು ಚಿಂತಿತರಾಗಿದ್ದರು. ಅವರಲ್ಲಿ ಹಲವರು ಮನೆಗೆ ಹಿಂತಿರುಗಲು ಬಯಸಿದ್ದರಂತೆ.

ಆಟಗಾರರು ವಿಶೇಷ ರೈಲಿನ ವ್ಯವಸ್ಥೆ:

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಬಿಕ್ಕಟ್ಟು ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಆಟಗಾರರನ್ನು ಧರ್ಮಶಾಲಾದಿಂದ ಹೊರಗೆ ಕರೆದೊಯ್ಯಲು ಬಿಸಿಸಿಐ ವಿಶೇಷ ರೈಲಿಗೆ ವ್ಯವಸ್ಥೆ ಮಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಸಹಾಯಕ ಸಿಬ್ಬಂದಿ ಮತ್ತು ಪ್ರಸಾರ ತಂಡವನ್ನು ಸಹ ಈ ರೈಲಿನ ಮೂಲಕ ಸ್ಥಳಾಂತರಿಸಲಾಗುತ್ತದೆ. ಮೊದಲನೆಯದಾಗಿ, ಆಟಗಾರರನ್ನು ಧರ್ಮಶಾಲಾದಿಂದ ಉನಾಗೆ ಕರೆದೊಯ್ಯಲಾಗುತ್ತದೆ. ಬಳಿಕ ದೆಹಲಿಗೆ ಕರೆತರಲು ಉನಾದಿಂದ ವಿಶೇಷ ರೈಲು ಚಲಿಸಲಿದೆ.