ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ ಕಮಿಷನರ್​ ದಯಾನಂದ್ ಎಚ್ಚರಿಕೆ!​​

ಬೆಂಗಳೂರು, ಮೇ 12: ಭಾರತ ಮತ್ತು ಪಾಕಿಸ್ತಾನ  ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್​​ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ನಾಗರಿಕರು ಜಾಗೃತರಾಗಿರುವಂತೆ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ.ದಯಾನಂದ್​ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಅಪರಿಚಿತ ಲಿಂಕ್​, ಇ-ಮೇಲ್​ಗಳ‌ ಮೇಲೆ ನಿಗಾವಹಿಸಿ. ಎಕ್ಸ್​ಕ್ಲೂಸಿವ್ ನ್ಯೂಸ್ ಲಿಂಕ್​​ಗಳು ಹಾಗೂ ಎಪಿಕೆ ಫೈಲ್ಸ್​, ಅಪರಿಚಿತ ಫಾರ್ವರ್ಡ್ ಲಿಂಕ್​​ ಕ್ಲಿಕ್ ಮಾಡದಂತೆ, ವಾಟ್ಸಾಪ್ ಸೆಕ್ಯೂರಿಟಿ ಅಪ್ಡೇಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.