ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್ಗಾರ್ಟ್ನಲ್ಲಿ ಭಾರತೀಯ ಸಮುದಾಯವು ಶಾಂತಿಯುವ ಮೆರವಣಿಗೆಯನ್ನು ನಡೆಸಿತು. ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.

ಸ್ಟಟ್ಗಾರ್ಟ್, ಮೇ 05: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವವರ ಸ್ಮರಣಾರ್ಥ ಸ್ಟಟ್ಗಾರ್ಟ್ನಲ್ಲಿ ಭಾರತೀಯ ಸಮುದಾಯವು ಶಾಂತಿಯುವ ಮೆರವಣಿಗೆಯನ್ನು ನಡೆಸಿತು. ಭಾರತೀಯ ಪರಿವಾರ್ ಬಿಡಬ್ಲ್ಯೂ ಬ್ಯಾನರ್ ಅಡಿಯಲ್ಲಿ, ಸ್ಟಟ್‌ಗಾರ್ಟ್‌ನಲ್ಲಿರುವ ಭಾರತೀಯ ವಲಸಿಗರು, ಭಾರತದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ 26 ಮುಗ್ಧ ಜೀವಗಳಿಗೆ ಗೌರವ ಸಲ್ಲಿಸಲು ಸ್ಕ್ಲೋಸ್‌ಪ್ಲಾಟ್ಜ್‌ನಲ್ಲಿ ಶಾಂತಿಯುತ ಮೆರವಣಿಗೆಯನ್ನು ಭಾನುವಾರ ಆಯೋಜಿಸಿದ್ದರು.
ಸಂಜೆ 5 ಗಂಟೆಗೆ ಭಾರತೀಯ ಸಮುದಾಯದ 300 ಕ್ಕೂ ಹೆಚ್ಚು ಸದಸ್ಯರ ಆಗಮನದೊಂದಿಗೆ ಪ್ರಾರಂಭವಾಯಿತು. ಎಲ್ಲಾ ಭಾರತೀಯರು ಹಣೆಯ ಮೇಲೆ ತಿಲಕವನ್ನು ಹಾಕಿಕೊಂಡಿದ್ದರು. ಆದರೆ ಕಾರ್ಯಕ್ರಮಕ್ಕೆ ಸ್ವಾಗತ ಕೋಲು ಅಲ್ಲ ಬದಲಾಗಿ ಆಂತರಿಕ ಗೌರವ ಮತ್ತು ಸಾಂಸ್ಕೃತಿಕ ಏಕತೆಯ ಗಂಭೀರ ಸಂಕೇತವಾಗಿ ತಿಲಕ ಇಟ್ಟುಕೊಂಡಿದ್ದರು.

ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಭಾಷಣಗಳು ನಡೆದವು, ನಂತರ ಶಾಂತಿ ಮಾರ್ಗ ಹಾಗೂ ಮೃತರ ಸ್ಮರಣಾರ್ಥ ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣಗಳಲ್ಲಿ ಹನುಮಾನ್ ಚಾಲೀಸಾದ ಸಾಮೂಹಿಕ ಪಠಣವು ನಡೆಯಿತು. ಅದರ ಎಲ್ಲರಲ್ಲಿ ಧೈರ್ಯ, ನಂಬಿಕೆ ಮತ್ತು ಏಕತೆಯ ಭಾವವನ್ನು ಮತ್ತೊಮ್ಮೆ ಮೂಡಿಸಿತು.
ಅಲ್ಲಿ ಪಾಲ್ಗೊಂಡವರು ಹಮ್ ಹೋಂಗೆ ಕಾಮಿಯಾಬ್ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು. ಈ ಮೆರವಣಿಗೆ ಸ್ಟಟ್‌ಗಾರ್ಟ್‌ನಲ್ಲಿರುವ ಹಿಂದೂ ಸಮುದಾಯದಿಂದ ಪ್ರಬಲ ಮತ್ತು ಒಗ್ಗಟ್ಟಿನ ಸಂದೇಶವನ್ನು ಸಾರಿತು.
ಉಗ್ರರು ಪಹಲ್ಗಾಮ್‌ನಲ್ಲಿ ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾದ ಟಿಆರ್ಎಫ್ ಹೊತ್ತಿತ್ತು. ಈ ದಾಳಿಗೆ ಇಡೀ ವಿಶ್ವವೇ ಆಕ್ರೋಶ ವ್ಯಕ್ತಪಡಿಸಿದೆ. ಭಯೋತ್ಪಾದಕರ ವಿರುದ್ಧದ ಸಮರಕ್ಕೆ ಜತೆಯಾಗಿ ನಿಂತಿವೆ.

