ಶಿರಸಿಯ ಸರ್ಕಾರಿ ಉರ್ದು ಶಾಲೆ ವಿದ್ಯಾರ್ಥಿನಿಗೆ 625 ಅಂಕ

ಶಿರಸಿ ಮೇ 02 : ನಗರದ ಸರ್ಕಾರಿ ಆಂಗ್ಲ ಉರ್ದು ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್‌ (625) ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಬಿಹಾರ ಮೂಲದ ಶಗುಫ್ತಾ ಐದು ವರ್ಷಗಳಿಂದ ಶಿರಸಿಯ ನಿವಾಸಿಯಾಗಿದ್ದು, ನಗರದ ಸರ್ಕಾರಿ ಉರ್ದು ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಬಿಹಾರದಲ್ಲಿ ಮೌಲ್ವಿಯಾಗಿ ಕಾರ್ಯನಿರ್ವಹಿಸಿದ್ದ ಮೌಲಾನ ಅವರ ಪುತ್ರಿಯಾಗಿದ್ದಾಳೆ. ಕೆಲಸದ ನಿಮಿತ್ತ ನಗರದ ಹೊರವಲಯದ ಟಿಪ್ಪು ನಗರದಲ್ಲಿ ವಾಸವಿರುವ ಕುಟುಂಬದ ಜತೆ ಇದ್ದು, ನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು.

ಈ ಕುರಿತು ಮಾತನಾಡಿದ ಶಗುಫ್ತಾ, ನನಗೆ ಶಾಲೆಯ ಶಿಕ್ಷಕ ವೃಂದದಿಂದ ಸಾಕಷ್ಟು ಬೆಂಬಲ ಸಿಕ್ಕಿದೆ. ರಂಜಾನ್‌ ಸಮಯದಲ್ಲೂ ವಿಶೇಷ ತರಗತಿ ತೆಗೆದುಕೊಂಡು ಮಾರ್ಗದರ್ಶನ ನೀಡಲಾಗಿತ್ತು. ಕಠಿಣ ಪರಿಶ್ರಮವೇ ಸಾಧನೆಗೆ ಮೂಲ. ನಾನೂ ಭವಿಚ್ಯದಲ್ಲಿ ವೈದ್ಯೆಯಾಗುವ ಆಸೆ ಹೊಂದಿದ್ದೇನೆ ಎಂದು ಹೇಳಿದ್ರು..

ಆರಂಭದಿಂದಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುತ್ತಿದ್ದ ಶಗುಫ್ತಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೂಡ ಉತ್ತಮ ರ್ಯಾಂಕ್‌ ಪಡೆಯುವ ವಿಶ್ವಾಸವಿತ್ತು. ಆಕೆಯ ಪರಿಶ್ರಮದ ಫಲವಾಗಿ ಪೂರ್ಣಾಂಕ ಬಂದಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಆನಂದ ಕೊರವರ ಹೇಳಿದ್ರು..