
ಅಂಕೋಲಾ, 29 : ಶಾಸಕ ಸತೀಶ್ ಸೈಲ್ ಮಂಜುಗುಣಿ – ಗಂಗಾವಳಿ ಸೇತುವೆಯನ್ನು ಮೇ 1ರಂದು ಉದ್ಘಾಟಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಮಂಜಗುಣಿ ಗ್ರಾಮಕ್ಕೆ ತೆರಳುವ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳಕ್ಕೆ ಶಾಸಕರು ಆಗಮಿಸಿದ್ದಾಗ, ಸಾರ್ವಜನಿಕರು ಹಾಗೂ ಶಾಸಕರ ನಡುವೆ ವಾಗ್ವಾದ ನಡೆಯಿತು. ಸರ್ವೀಸ್ ರಸ್ತೆ ನಿರ್ಮಾಣ ಮಾಡಿಕೊಡುವ ವಿಚಾರವಾಗಿ, ಸಾರ್ವಜನಿಕರು ಶಾಸಕ ಸತೀಶ್ ಸೈಲ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಸರ್ವೀಸ್ ರಸ್ತೆ ಮುಗಿದ ನಂತರವೇ ಸೇತುವೆ ಕೂಡು ರಸ್ತೆಯ ಡಾಂಬರಿಕರಣ ಮಾಡಿ. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
