
ಬೆಂಗಳೂರು, ಏಪ್ರಿಲ್ 16: ನಗರದಲ್ಲಿ ನಮ್ಮ ಮೆಟ್ರೋ ಕಾಮಗಾರಿ ವೇಳೆ ಬಾರಿ ಅನಾಹುತವೊಂದು ನಡೆದಿದೆ. ಬೃಹತ್ ವಯಾಡೆಕ್ಟ್ (ಬೃಹದಾಕಾರದ ತಡೆಗೋಡೆ) ಸಾಗಿಸುವ ವೇಳೆ ನಿರ್ಲಷ್ಯದಿಂದ ಮಾಡಿದ ಎಡವಟ್ಟು ವ್ಯಕ್ತಿಯೋರ್ವನ ಬಲಿ ಪಡೆದುಕೊಂಡಿದೆ. ಖಾಸಿಂ ಮೃತ ಆಟೋ ಚಾಲಕ. ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದ್ದು, ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಮೆಟ್ರೋ ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.