ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮುಂದಾದ ಕಾಂಗ್ರೆಸ್

ದೆಹಲಿ, ಏ.5: ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ (Waqf Bill) ಮಂಡಿಸಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈ ಬಗ್ಗೆ ಇದೀಗ ಭಾರೀ ಬಿಸಿಬಿಸಿ ಚರ್ಚೆಗಳು ನಡೆಯುತ್ತಿದೆ. ಮಸೂದೆ ಮಂಡಿಸಿದ ನಂತರ ವಿರೋಧ ಪಕ್ಷಗಳು ಮೋದಿ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದೆ. ಇದೀಗ ಈ ವಸೂದೆಯನ್ನು ವಿರೋಧಿಸಿ ಕಾಂಗ್ರೆಸ್ ಸುಪ್ರೀಂ ಕೋರ್ಟ್​​​​ ಮೆಟ್ಟಿಲೇರಿದೆ. ಕೇಂದ್ರದ ಈ ನಿರ್ಧಾರವನ್ನು ವಿರುದ್ಧ ಕಾಂಗ್ರೆಸ್​​​​ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಿದೆ. ಶೀಘ್ರದಲ್ಲಿ ಈ ಮಸೂದೆಯನ್ನು ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು ಶುಕ್ರವಾರ ಮುಂಜಾನೆ ಸಂಸತ್ತು ಅಂಗೀಕರಿಸಿತು. ರಾಜ್ಯಸಭೆ ಮಧ್ಯರಾತ್ರಿ ಈ ಮಸೂದೆಯನ್ನು ಅಂಗೀರಿಸಿತು.

ಇನ್ನು ಈ ಮಸೂಸೆ ಕಾನೂನಾಗಲು, ರಾಷ್ಟ್ರಪತಿಗಳ ಸಹಿ ಅಗತ್ಯವಿದೆ, ಅದು ಇನ್ನೂ ಬಾಕಿ ಇದೆ. ವಕ್ಫ್ (ತಿದ್ದುಪಡಿ) ಮಸೂದೆ ಬಗ್ಗೆ ನಾನು ಸುಪ್ರೀಂ ಕೋರ್ಟ್​​​ನಲ್ಲಿ ಪ್ರಶ್ನಿಸಿಲಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಮ್ಮ ಎಕ್ಸ್​​ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಸಂವಿಧಾನದಲ್ಲಿರುವ ತತ್ವಗಳು, ನಿಬಂಧನೆಗಳು ಮತ್ತು ಅಭ್ಯಾಸಗಳ ಮೇಲೆ ಮೋದಿ ಸರ್ಕಾರದ ದಾಳಿ ಮಾಡುತ್ತಿದೆ. ಅದನ್ನು ಖಂಡಿತವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು.

ಇನ್ನು ಈ ಮಸೂದೆಯಲ್ಲಿ ಭಾರೀ ಬಹುಮತದಿಂದ ಲೋಕಸಭೆಯಲ್ಲಿ ಅಂಗೀಕರವಾಗಿತ್ತು. ಇದರ ಜತೆಗೆ ವಿರೋಧ ಪಕ್ಷಗಳ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲೂ ಅಂಗೀಕರವಾಗಿದೆ. ರಾಜ್ಯಸಭೆಯಲ್ಲಿ 128 ಪರವಾಗಿದ್ದಾರೆ. ಈ ಮಸೂದೆಗೆ 95 ವಿರೋಧ ಇತ್ತು. ಲೋಕಸಭೆಯಲ್ಲಿ 288 ಸಂಸದರ ಈ ಮಸೂದೆ ಒಪ್ಪಿಗೆ ನೀಡಿದ್ರೆ, 232 ಸಂಸದರು ಈ ಮಸೂದೆಯ ವಿರುದ್ಧ ಮತ ಚಲಾಯಿಸಿದ್ದಾರೆ. ಇದೀಗ ದೇಶದಲ್ಲಿ ಈ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್​​​ ಈ ಮಸೂದೆಯನ್ನು ವಿರೋಧಿಸಿದರೆ, ಬಿಜೆಪಿ ಇದು ಎಲ್ಲರೂ ಒಗ್ಗೂಡಿಸುತ್ತದೆ. ಎಲ್ಲ ಆಸ್ತಿಯನ್ನು ಸಂರಕ್ಷಣೆ ಮಾಡುತ್ತದೆ ಎಂದು ಹೇಳಿದರು.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಈ ಬಗ್ಗೆ ಭಾರೀ ಗದ್ದಲವನ್ನು ಸೃಷ್ಟಿಸಿದೆ. ಗುರುವಾರ ನಡೆದ ರಾಜ್ಯಸಭೆ ಚರ್ಚೆಯಲ್ಲಿ ಕಾಂಗ್ರೆಸ್​​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಮಸೂದೆಯನ್ನು ವಾಪಸ್ಸು ಪಡೆಯುವಂತೆ ಕೇಂದ್ರ ಗೃಹಸಚಿವ ಅಮಿತ್​ ಶಾ ಅವರಿಗೆ ಮನವಿ ಮಾಡಿದರು. ಇದು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಹೇಳಿದರು. ನೀವು ಮಾಡುತ್ತಿರುವುದು ಒಳ್ಳೆಯದಲ್ಲ, ಇದು ದೇಶದ ಜನರನ್ನು ಗೊಂದಲಕ್ಕೆ ಹಾಗೂ ವಿವಾದಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.