
ರಾಯಚೂರು, ಜನವರಿ 22: ಟೈರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ನಡೆದಿದೆ. ಕ್ರೂಸರ್ ಚಾಲಕ ಶಿವ (24), ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಾದ ಅಯ್ಯವಂದನ್ (18), ಸುಜೇಂದ್ರ (22) ಹಾಗೂ ಅಭಿಲಾಷ್(20) ಮೃತ ದುರ್ದೈವಿಗಳು. 10 ಜನರಿಗೆ ಗಂಭೀರ ಗಾಯವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂತ್ರಾಲಯದಿಂದ ಹಂಪಿಯ ನರಹರಿ ಆರಾಧನೆಗೆ ತೆರಳಿದ್ದ ವಾಹನ ಅಪಘಾಕ್ಕೀಡಾಗಿದೆ.