‘ಹನುಮಂತನೇ ನನ್ನ ಫೇವರಿಟ್ ಸ್ಪರ್ಧಿ’; ಶರಣ್ ಮಾತಿನಿಂದ ಘಟಾನುಘಟಿಗಳಿಗೆ ಟೆನ್ಷನ್

ಬಿಗ್ ಬಾಸ್ ಮನೆಗೆ ಆಗಾಗ ಸೆಲೆಬ್ರಿಟಿಗಳ ಆಗಮನ ಆಗೋದು ಕಾಮನ್. ಈ ರೀತಿ ಬರುವ ಸ್ಪರ್ಧಿಗಳು ಮನರಂಜನೆ ಕೊಡುತ್ತಾರೆ. ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾರೆ. ಕೆಲವೊಮ್ಮೆ ತಮ್ಮಿಷ್ಟದ ಸ್ಪರ್ಧಿ ಯಾರು ಎಂಬುದನ್ನು ಕೂಡ ರಿವೀಲ್ ಮಾಡಿದ ಉದಾಹರಣೆ ಇದೆ. ‘ಛೂ ಮಂತರ್’ ಸಿನಿಮಾ ಪ್ರಚಾರ ಹಾಗೂ ಫಿನಾಲೆ ಟಿಕೆಟ್ ನೀಡಲು ದೊಡ್ಮನೆಗೆ ಶರಣ್ ಹಾಗೂ ಅದಿತಿ ಪ್ರಭುದೇವ ಅವರು ಆಗಮಿಸಿದ್ದರು. ಈ ವೇಳೆ ಹನುಮಂತ ಅವರೇ ತಮ್ಮ ಫೇವರಿಟ್ ಸ್ಪರ್ಧಿ ಎಂದು ಶರಣ್ ಹೇಳಿದ್ದಾರೆ. ಇದರಿಂದ ದೊಡ್ಮನೆಯಲ್ಲಿ ಕೆಲವಷ್ಟು ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

ಸೆಲೆಬ್ರಿಟಿಗಳು ಕೂಡ ಬಿಗ್ ಬಾಸ್ ನೋಡುತ್ತಾರೆ. ಅದೇ ರೀತಿ ಶರಣ್ ಕೂಡ ಸಮಯ ಸಿಕ್ಕಾಗ ಬಿಗ್ ಬಾಸ್ ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಏಕೆಂದರೆ ಹನುಮಂತನ ಆಟ ಅವರಿಗೆ ಇಷ್ಟ ಆಗಿದೆ. ರಜತ್, ತ್ರಿವಿಕ್ರಂ, ಮಂಜು, ಮೋಕ್ಷಿತಾ, ಗೌತಮಿ ಅಂಥ ಸ್ಟ್ರಾಂಗ್ ಸ್ಪರ್ಧಿಗಳ ಮಧ್ಯೆ ಅವರಿಗೆ ಹನುಮಂತ ಇಷ್ಟ ಆಗಿದ್ದಾರೆ ಎಂದರೆ ಉಳಿದವರಿಗೆ ಸ್ವಲ್ಪ ಟೆನ್ಷನ್ ಆಗಲೇಬೇಕು.

ಸೋಫಾ ಮೇಲೆ ಎಲ್ಲರೂ ಕುಳಿತಿದ್ದಾಗ ಶರಣ್ ಅವರು ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇದ್ದರು. ಆಗ ಅವರು ಹನುಮಂತ ಬಗ್ಗೆ ಮಾತನಾಡಿದರು. ‘ನೀವು ನನ್ನ ಫೇವರಿಟ್ ಸ್ಪರ್ಧಿ. ಇದನ್ನು ಎಲ್ಲಿಯೂ ಹೇಳಿಲ್ಲ’ ಎಂದರು ಶರಣ್. ಆ ಬಳಿಕ ಟಾಸ್ಕ್ ವಿನ್ ಆಗಿ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದಿದ್ದಾರೆ. ಇದಾದ ಬಳಿಕ ದೊಡ್ಮನೆಯಲ್ಲಿ ಚರ್ಚೆಗಳು ಜೋರಾಗಿವೆ. ಭವ್ಯಾ ಗೌಡ ಅವರು ಸಾಕಷ್ಟು ಕೊರಗಿದ್ದಾರೆ.

ಭವ್ಯಾ ಅವರು ಟಾಸ್ಕ್​​ನ ಮುಗಿಸಲು ಮೂರು ನಿಮಿಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಹನುಮಂತ ಅವರು ಕೇವಲ ಎರಡು ನಿಮಿಷ ಹದಿನೇಳು ಸೆಕೆಂಡ್​ನಲ್ಲಿ ಟಾಸ್ಕ್ ಪೂರ್ಣಗೊಳಿಸಿ ಫಿನಾಲೆ ಟಿಕೆಟ್​ನ ತಮ್ಮದಾಗಿಸಿಕೊಂಡರು. ಈಗ ಆಟ ಇನ್ನಷ್ಟು ಕಠಿಣವಾಗಲಿದೆ. ಹನುಮಂತ ಅವರನ್ನು ಬಿಟ್ಟು 8 ಸ್ಪರ್ಧಿಗಳು ಇದ್ದಾರೆ.