ಚೀನಾದ ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಹ್ಯೂಮನ್‌ ಮೆಟಾನ್ಯೂಮೊವೈರಸ್‌ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ ತಿಳಿಸಿದೆ.

ಹ್ಯೂಮನ್‌ ಮೆಟಾನ್ಯೂಮೊವೈರಸ್  ಇತರೆ ವೈರಸ್‌ ಗಳಂತೆ ಜನರಿಂದ ಜನರಿಗೆ ಹರಡಲಿದೆ. ಸಾಮಾನ್ಯವಾಗಿ ಶೀತ ಉಂಟು ಮಾಡಲಿದೆ. ಸಣ್ಣಮಟ್ಟದ ಉಸಿರಾಟದ ಸಮಸ್ಯೆ ತರಬಹುದು ಅಷ್ಟೆ. ಜೀವ ಹಾನಿ ಮಾಡುವಷ್ಟು ಅಪಾಯಕಾರಿಯಲ್ಲ. ಸದ್ಯಕ್ಕೆ ಭಾರತದಲ್ಲಿ ಎಚ್‌ಎಂಪಿವಿ ವೈರಸ್‌ ಸೋಂಕಿನ ಪ್ರಕರಣಗಳು ಕಂಡು ಬಂದಿಲ್ಲ. ಭಯಪಡುವ ಅಗತ್ಯವಿಲ್ಲ ಎಂದು ನಿರ್ದೇಶನಾಲಯದ ಮುಖ್ಯಸ್ಥ ಡಾ.ಅತುಲ್‌ ಗೋಯಲ್‌ ಹೇಳಿದ್ದಾರೆ.

ಚೀನಾದಲ್ಲಿ ಪತ್ತೆಯಾಗಿರುವ ವೈರಸ್‌, ಭಾರತದ ಮಟ್ಟಿಗೆ ತೀರ ಗಂಭೀರವಾದ ಪರಿಣಾಮ ಬೀರಲ್ಲ. ಸಾಮಾನ್ಯ ವೈರಸ್‌ ಗಳಂತೆ ಜ್ವರದಂತಹ ರೋಗ ಲಕ್ಷಣ ಉಂಟು ಮಾಡಬಹುದಾಗಿದೆ. ವಯೋವೃದ್ಧರು ಹಾಗೂ ಒಂದು ವರ್ಷದೊಳಗಿನ ಮಕ್ಕಳಲ್ಲಿಹೆಚ್ಚು ಕಂಡು ಬರುವ ಸಾಧ್ಯತೆಗಳಿವೆ ಎಂದು ಗೋಯಲ್‌ ಎಚ್ಚರಿಸಿದ್ದಾರೆ.