ಅಶ್ವಮೇಧ ಕುದುರೆಯ ಓಟಕ್ಕೆ ಪ್ರಶಸ್ತಿಗಳ ಸುರಿಮಳೆ – KSRTCಗೆ 9 ಬಹುಮಾನ

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸರ್ಕಾರಿ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿಗೆ 9 ರಾಷ್ಟ್ರದ ಮಟ್ಟದ ಪ್ರಶಸ್ತಿಗಳು ಲಭಿಸಿದೆ.  6 AdWorld Showdown ಚಿನ್ನದ ಪ್ರಶಸ್ತಿ, 2 Grow Care India ಹಾಗೂ 1 PRSI ರಾಷ್ಟ್ರೀಯ ಪ್ರಶಸ್ತಿ-2024 ಸಿಕ್ಕಿದೆ.

AdWorld Showdown ಪ್ರಶಸ್ತಿಗಳು
1. ಅಶ್ವಮೇಧ ಕ್ಲಾಸಿಕ್ ಬಸ್ಸುಗಳ ಪರಿಚಯ- ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಉಪಕ್ರಮ
2. ಅಂಬಾರಿ ಉತ್ಸವ ಬಸ್ ಅತ್ಯುತ್ತಮ ಬ್ರಾಂಡ್ ಅನುಭವ.
3. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ಅತ್ಯುತ್ತಮ ಕಾರ್ಪೊರೇಟ್ ಸಂವಹನ ಹಾಗೂ ನಿರ್ವಹಣೆ
4. ಪಲ್ಲಕ್ಕಿ ಬಸ್ಸುಗಳ -ಅತ್ಯುತ್ತಮ ಗ್ರಾಹಕ ಸ್ವೀಕೃತಿ
5. ಪ್ರತಿಷ್ಠಿತ ಬಸ್ಸು ಸೇವೆಗಳ ಬ್ರಾಂಡಿಂಗ್- ಅತ್ಯುತ್ತಮ ಸಾರ್ವಜನಿಕ ಸಂಪರ್ಕ
6. ಅಶ್ವಮೇಧ ಕ್ಲಾಸಿಕ್ ಬಸ್ಸುಗಳು- ವರ್ಷದ ಅತ್ಯುತ್ತಮ ಬ್ರ್ಯಾಂಡ್

ನಿಗಮವು ಅತ್ಯುತ್ತಮ ಪರಿಸರ ನಿರ್ವಹಣೆ ಹಾಗೂ ವಿನೂತನ ಮಾನವ ಸಂಪನ್ಮೂಲ ಯೋಜನೆಗಳ ಅನುಷ್ಟಾನಕ್ಕಾಗಿ ಗ್ರೋ ಕೇರ್ ಇಂಡಿಯಾ ಪ್ರಶಸ್ತಿ ಎರಡು ವಿಭಾಗದಲ್ಲಿ ಪಡೆದಿದೆ. PRSI ರಾಷ್ಟ್ರೀಯ ಪ್ರಶಸ್ತಿಯನ್ನು ನಿಗಮಕ್ಕೆ ಕಾರ್ಪೋರೇಟ್ ಚಿತ್ರ ವಿಭಾಗದಲ್ಲಿ ಲಭಿಸಿರುತ್ತದೆ.

ನಿಗಮಕ್ಕೆ AdWorld ಪ್ರಶಸ್ತಿಗಳನ್ನು ನವದೆಹಲಿಯಲ್ಲಿ, ಗ್ರೋ ಕೇರ್ ಇಂಡಿಯಾ ಪ್ರಶಸ್ತಿಗಳನ್ನು ಗೋವಾದಲ್ಲಿ ಹಾಗೂ ಪಿಆರ್‌ಎಸ್‌ಐ ಪ್ರಶಸ್ತಿಯನ್ನು ರಾಯಪುರದಲ್ಲಿ ಪ್ರದಾನ ಮಾಡಲಾಯಿತು.

ಅಶ್ವಮೇಧ ಬಸ್‌
ಫೆಬ್ರವರಿಯಲ್ಲಿ ಹೊಸ‌ ವಿನ್ಯಾಸದ ಈ ಬಸ್‌ ಅನ್ನು ‘ಅಶ್ವಮೇಧ‘ ಎಂಬ ಹೊಸ‌ ಬ್ರಾಂಡ್‌ ಅಡಿ ಕೆಎಸ್‌ಆರ್‌ಟಿಸಿ ರಸ್ತೆಗೆ ಇಳಿಸಿತ್ತು. 3.42 ಮೀಟರ್ ಎತ್ತರ ಇರುವ ‘ಅಶ್ವಮೇಧ’ (ಕ್ಲಾಸಿಕ್‌) ಬಸ್‌ನಲ್ಲಿ 52 ಆಸನಗಳಿದ್ದು, ‘ಬಕೆಟ್‌ ಟೈಪ್‌’ ವಿನ್ಯಾಸವನ್ನು ಹೊಂದಿವೆ.

ಹನದ ಮುಂದಿನ ಮತ್ತು ಹಿಂದಿನ ಗಾಜು ವಿಶಾಲವಾಗಿವೆ. ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು ದೊಡ್ಡದಾಗಿದ್ದು, ಟಿಂಟೆಡ್‌ ಗಾಜುಗಳನ್ನು ಹೊಂದಿವೆ. ಲಗೇಜ್‌ ಕ್ಯಾರಿಯರ್‌ ಕೂಡ ದೊಡ್ಡದಿದೆ. ಕುಳಿತುಕೊಳ್ಳಲು ಸೀಟು ಸಹ ಚೆನ್ನಾಗಿದೆ. ಮಧ್ಯೆ ನಿಂತುಕೊಳ್ಳಲು ಕೂಡ ವಿಶಾಲ ಜಾಗ ಇರುವುದರಿಂದ ಬೇರೆ ಸಾರಿಗೆ ಬಸ್‌ಗಳ ಬದಲು ಈ ಬಸ್‌ಗಳಲ್ಲಿ ಜನ ಪ್ರಯಾಣಿಸಲು ಆಸಕ್ತಿ ತೋರಿಸುತ್ತಿದ್ದಾರೆ.